Home ಟಾಪ್ ಸುದ್ದಿಗಳು ಪುತ್ತೂರು | ಬಸ್- ಬೈಕ್ ನಡುವೆ ಅಪಘಾತ: ಸವಾರ ಮೃತ್ಯು

ಪುತ್ತೂರು | ಬಸ್- ಬೈಕ್ ನಡುವೆ ಅಪಘಾತ: ಸವಾರ ಮೃತ್ಯು

ಪುತ್ತೂರು: ಸರ್ಕಾರಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಪುರುಷರಕಟ್ಟೆಯಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕುಂಡಡ್ಕ ನಿವಾಸಿ ಮೋಕ್ಷಿತ್ ಗೌಡ (23) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಪುರುಷರಕಟ್ಟೆಯಲ್ಲಿ ರೂಂ ಮಾಡಿಕೊಂಡು ಉಳಿದುಕೊಂಡಿದ್ದ ಮೋಕ್ಷಿತ್ ಸರ್ವಿಸ್ ಗೆ ಇಟ್ಟಿದ್ದ ತನ್ನ ಬೈಕನ್ನು ವಾಪಾಸು ತರುತ್ತಿದ್ದ ವೇಳೆ ಕಾಣಿಯೂರು ಸುಬ್ರಹ್ಮಣ್ಯ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.


ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣೆಯ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

Join Whatsapp
Exit mobile version