ಪುತ್ತೂರು: ಅನ್ಯಕೋಮಿನ ಯುವಕರೊಂದಿಗೆ ತೆರಳುತ್ತಿದ್ದ ಯುವತಿಗೆ ತಡೆ

Prasthutha|

ಪುತ್ತೂರು: ಬಸ್ಸು ನಿಲ್ದಾಣದಲ್ಲಿ ಕುಳಿತಿದ್ದ ಇಬ್ಬರು ಯುವಕರು ಹಾಗೂ ಓರ್ವ ಯುವತಿಯನ್ನು ತಂಡವೊಂದು ತಡೆದು ಪೊಲೀಸ್ ಠಾಣೆಗೆ ಕರೆದೊಯ್ದ ಘಟನೆ ಪುತ್ತೂರಿನ ಬಸ್ಸು ನಿಲ್ದಾಣದ ಬಳಿ ಬುಧವಾರ ನಡೆದಿದೆ.


ಯುವಕರು ಮತ್ತು ಯುವತಿ ಅನ್ಯಧರ್ಮಕ್ಕೆ ಸೇರಿದವರು ಎಂಬ ಮಾಹಿತಿ ಪಡೆದ ಯುವಕರ ತಂಡವೊಂದು ಸ್ಥಳಕ್ಕೆ ಆಗಮಿಸಿ ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದೆ.

- Advertisement -


ರಾಯಚೂರು ಮೂಲದ ಯುವಕನಿಗೆ ಇನ್ಸ್ಟಾ ಗ್ರಾಂ ಮೂಲಕ ಪುತ್ತೂರಿನ ಯುವತಿಯೊಬ್ಬಳ ಪರಿಚಯವಾಗಿದೆ. ಈ ಪರಿಚಯ ಪ್ರೀತಿಗೆ ತಿರುಗಿದ್ದು, ಆಕೆಯನ್ನು ಭೇಟಿಯಾಗಲು ಯುವಕ ತನ್ನ ಸ್ನೇಹಿತನೊಂದಿಗೆ ಪುತ್ತೂರಿಗೆ ಬಂದಿದ್ದಾನೆ. ಈ ಯುವಕರನ್ನು ಭೇಟಿಯಾಗಲು ಯುವತಿಯೂ ಪುತ್ತೂರು ಬಸ್ಸು ನಿಲ್ದಾಣದ ಬಳಿ ಬಂದಿದ್ದಾಳೆ. ಇದನ್ನು ಗಮನಿಸಿದ ತಂಡ ಇಬ್ಬರನ್ನೂ ವಿಚಾರಿಸಿ ಠಾಣೆಗೆ ಕರೆದೊಯ್ದಿದೆ. ಪೊಲೀಸರು ಯುವತಿಯ ತಂದೆಯನ್ನು ಠಾಣೆಗೆ ಕರೆಸಿ ಆಕೆಯನ್ನು ಕಳುಹಿಸಿಕೊಟ್ಟಿದ್ದಾರೆ.

- Advertisement -