Home ಟಾಪ್ ಸುದ್ದಿಗಳು ಉಕ್ರೇನ್‌ಗೆ ಸೈನ್ಯ ಕಳುಹಿಸಿದರೆ ಪರಮಾಣು ಯುದ್ಧದ ಎಚ್ಚರಿಕೆ ನೀಡಿದ ಪುಟಿನ್

ಉಕ್ರೇನ್‌ಗೆ ಸೈನ್ಯ ಕಳುಹಿಸಿದರೆ ಪರಮಾಣು ಯುದ್ಧದ ಎಚ್ಚರಿಕೆ ನೀಡಿದ ಪುಟಿನ್

ಮಾಸ್ಕೋ: ಯಾವುದೇ ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನ್‌ನಲ್ಲಿ ಹೋರಾಡಲು ಸೈನ್ಯವನ್ನು ಕಳುಹಿಸುವ ಧೈರ್ಯಮಾಡಿದರೆ ಆ ರಾಷ್ಟ್ರ ಅಣ್ವಸ್ತ್ರ ಬಳಕೆಯ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದಾರೆ.

ರಷ್ಯಾ ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದ ಪುಟಿನ್, ಪಾಶ್ಚಿಮಾತ್ಯ ದೇಶಗಳು ರಷ್ಯಾದ ಸಾಮರ್ಥ್ಯ ಕುಗ್ಗಿಸಲು ಪ್ರಯತ್ನಿಸುತ್ತಿವೆ. ಆದರೆ ರಷ್ಯಾ ವಿಚಾರದಲ್ಲಿ ಮಧ್ಯ ಪ್ರವೇಶಿಸುವುದು ಎಷ್ಟು ಅಪಾಯಕಾರಿ ಎಂಬುದನ್ನು ಆ ದೇಶಗಳು ಅರ್ಥ ಮಾಡಿಕೊಂಡರೆ ಅವರಿಗೆ ಒಳಿತು ಎಂದಿದ್ದಾರೆ.

ಈ ವಾರದ ಆರಂಭದಲ್ಲಿ ನ್ಯಾಟೊ ಸದಸ್ಯ ರಾಷ್ಟ್ರಗಳು ಉಕ್ರೇನ್‌ಗೆ ಸೇನಾಪಡೆಗಳನ್ನುಕಳುಹಿಸಬೇಕು ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಸಲಹೆ ನೀಡಿದ್ದರು. ಮ್ಯಾಕ್ರನ್ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಪುಟಿನ್ ಅವರು ಈ ಎಚ್ಚರಿಕೆ ನೀಡಿದ್ದಾರೆ.

Join Whatsapp
Exit mobile version