Home ಟಾಪ್ ಸುದ್ದಿಗಳು ಸಚಿವ ಪ್ರವೇಶಿಸಿದ ಬಳಿಕ ವಿಷ್ಣುಪಾದ ದೇವಾಲಯದ ಶುದ್ಧೀಕರಣ

ಸಚಿವ ಪ್ರವೇಶಿಸಿದ ಬಳಿಕ ವಿಷ್ಣುಪಾದ ದೇವಾಲಯದ ಶುದ್ಧೀಕರಣ

ಪಾಟ್ನ: ಬಿಹಾರದ ಮಾಹಿತಿ ತಂತ್ರಜ್ಞಾನ ಮಂತ್ರಿ ಮುಹಮ್ಮದ್ ಇಸ್ಮಾಯಿಲ್ ಮನ್ಸೂರಿ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆಗೆ ಬಿಹಾರದಲ್ಲಿ ವಿಷ್ಣುಪಾದ ದೇವಾಲಯದ ಪ್ರದೇಶಿಸಿದ ಬಳಿಕ ಬ್ರಾಹ್ಮಣರು ಗಂಗಾ ಜಲದಿಂದ ಗರ್ಭಗೃಹ ಇತ್ಯಾದಿ ತೊಳೆದು ಶುದ್ಧೀಕರಣ ಮಾಡಿದ್ದಾರೆ.

ದೇವಸ್ಥಾನದ ಒಂದು ಕಡೆ ಅನ್ಯ ಧರ್ಮೀಯರಿಗೆ ಪ್ರವೇಶವಿಲ್ಲ ಎಂಬ ಬೋರ್ಡು ಹಾಕಲಾಗಿತ್ತು. ಮನ್ಸೂರಿಯವರು ನಿತೀಶ್ ಕುಮಾರ್ ಜೊತೆಗೆ ಹೋಗುವಾಗ ಅದನ್ನು ಗಮನಿಸಿಲ್ಲ. ಇದನ್ನು ಈಗ ಬಿಜೆಪಿಯು ವಿವಾದ ಮಾಡಿದೆ.

ಬಿಹಾರ ಬಿಜೆಪಿ ಅಧ್ಯಕ್ಷ ಸಂಜಯ್ ಜೈಸ್ವಾಲ್ ಅವರು “ನಿತೀಶ್ ಕುಮಾರ್ ರಿಗೆ ಧೈರ್ಯವಿದ್ದರೆ ಮೆಕ್ಕಾ ಮತ್ತು ಮದೀನಾದೊಳಗೆ ಹೋಗಿ ಬರಲಿ” ಎಂದು ಸವಾಲು ಹಾಕಿದ್ದರು.

ಕೇಂದ್ರದ ಗೃಹ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು ಒಂದು ಹೆಜ್ಜೆ ಮುಂದೆ ಹೋಗಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ರನ್ನು ಟೀಕಿಸಿದ್ದಾರೆ.

Join Whatsapp
Exit mobile version