Home ಕರಾವಳಿ ಪುಂಜಾಲ್ ಕಟ್ಟೆ ಹೆಡ್ ಕಾನ್ಸ್ ಸ್ಟೆಬಲ್ ಅಪಘಾತದಲ್ಲಿ ಮೃತ್ಯು

ಪುಂಜಾಲ್ ಕಟ್ಟೆ ಹೆಡ್ ಕಾನ್ಸ್ ಸ್ಟೆಬಲ್ ಅಪಘಾತದಲ್ಲಿ ಮೃತ್ಯು

ಬೆಳ್ತಂಗಡಿ: ಕರ್ತವ್ಯ ನಿರತ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಸ್ಟೆಬಲ್ ಒಬ್ಬರು ಬೈಕ್ ಅಪಘಾತದಲ್ಲಿ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ನೆರಳಕಟ್ಟೆಯಲ್ಲಿ ಶುಕ್ರವಾರ ನಡೆದಿದೆ.


ಅಬೂಬಕರ್ (48) ಮೃತಪಟ್ಟ ಹೆಡ್ ಕಾನ್ಸ್ ಸ್ಟೆಬಲ್ .

ಅಬೂಬಕರ್‌ ಅವರು ವೇಣೂರಿನ ಮರೋಡಿಯವರು. ವಾಮದಪದವಿನಲ್ಲಿ ನಿಶ್ಚಿತ ಕೆಲಸ ಮುಗಿಸಿ ಹಿಂದಿರುಗುವಾಗ ಈ ಅಪಘಾತ ನಡೆದಿದೆ. ಎದುರು ಬೈಕ್‌ ನಲ್ಲಿದ್ದ ಇರ್ವತ್ತೂರಿನ ದುರ್ಗಾಪ್ರಸಾದ್ ಅವರು ತೀವ್ರ ಗಾಯಗೊಂಡು, ಮಂಗಳೂರಿನ ಆಸ್ಪತ್ರೆಗೆ ಸೇರಿಸಲ್ಪಟ್ಟಿದ್ದಾರೆ. ಹೆಡ್‌ ಕಾನ್ಸ್‌ಟೇಬಲ್ ಅವರ ಹಿಂದೆಯೇ ಜೀಪಿನಲ್ಲಿ ಬರುತ್ತಿದ್ದ ಪೋಲೀಸರು ವೇಗವಾಗಿ ರಕ್ಷಣೆಗೆ ಇಳಿದರಾದರೂ ಅಬೂಬಕರ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ

Join Whatsapp
Exit mobile version