ಸ್ವಾತಂತ್ರ್ಯ ಪೂರ್ವದ ಮಸೀದಿಯ ಪುನರ್‌ ನಿರ್ಮಾಣಕ್ಕೆ ದೇಣಿಗೆ ನೀಡಿದ ಹಿಂದೂ, ಸಿಖ್ಖರು : ಸೌಹಾರ್ದತೆ ಮೆರೆದ ಪಂಜಾಬ್‌ ನ ಗ್ರಾಮ

Prasthutha: June 16, 2021

ಲುಧಿಯಾನ : ಪಂಜಾಬ್‌ ನ ಮೊಗಾ ಜಿಲ್ಲೆಯ ಗ್ರಾಮವೊಂದರ ಮುಸ್ಲಿಮರಿಗಾಗಿ ಸ್ಥಳೀಯ ಹಿಂದುಗಳು, ಸಿಖ್ಖರು ಮಸೀದಿ ನಿರ್ಮಿಸಲು ಮುಂದಾಗಿದ್ದು, ಆ ಮೂಲಕ ಸೌಹಾರ್ದತೆ ಮೆರೆದಿದ್ದಾರೆ. ಎಲ್ಲಾ ಸಮುದಾಯಗಳ ಸಮ್ಮುಖದಲ್ಲಿ ಮಸೀದಿಗೆ ಭಾನುವಾರ ಶಂಕುಸ್ಥಾಪನೆ ಮಾಡಲಾಗಿದೆ.

ಮೊಗಾ ಜಿಲ್ಲೆಯ ಭೂಲಾರ್‌ ಗ್ರಾಮದಲ್ಲಿ ಎಂಟು ಗುರುದ್ವಾರ ಎರಡು ದೇವಸ್ಥಾನಗಳಿವೆ. ಆದರೆ ಮಸೀದಿಯಿಲ್ಲ. ೧೯೪೭ರ ದೇಶ ವಿಭಜನೆಗೂ ಮೊದಲು ಅಲ್ಲಿ ಮಸೀದಿಯಿತ್ತು. ಅದು ಕಾಲಾನುಕಾಲಕ್ಕೆ ನಶಿಸಿತ್ತು. ಗ್ರಾಮದಲ್ಲಿ ನಾಲ್ಕು ಮುಸ್ಲಿಂ ಕುಟುಂಬಗಳಿವೆ ಎಂದು ಗ್ರಾಮ ಸರಪಂಚ್‌ ಪಾಲಾ ಸಿಂಗ್‌ ಹೇಳಿದ್ದಾರೆ.

ಈ ನಾಲ್ಕು ಕುಟುಂಬಗಳು ಮೊದಲಿನಿಂದಲೂ ಜೊತೆಯಾಗಿ ಸೌಹಾರ್ದತೆಯಿಂದ ಬದುಕಿದೆ. ಹೀಗಾಗಿ ಈ ಮುಸ್ಲಿಂ ಕುಟುಂಬಗಳಿಗಾಗಿ ಮಸೀದಿ ನಿರ್ಮಿಸಲು ಗ್ರಾಮಸ್ಥರು ೧೦೦ ರೂ.ಯಿಂದ ೧ ಲಕ್ಷ ರೂ. ವರೆಗೂ ದೇಣಿಗೆ ನೀಡಿದ್ದಾರೆ. ವಕ್ಫ್‌ ಬೋರ್ಡ್‌ ಸದಸ್ಯರೂ ದೇಣಿಗೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮಸೀದಿ ನಿರ್ಮಾಣಗೊಳ್ಳುತ್ತಿರುವುದಕ್ಕೆ ನಮಗೆಲ್ಲಾ ತುಂಬಾ ಸಂತೋಷವಾಗಿದೆ ಎಂದು ಸಿಂಗ್‌ ಹೇಳಿದ್ದಾರೆ.

ಮಸೀದಿ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ಅದ್ದೂರಿಯಾಗಿ ಮಾಡಲಾಗಿದೆ. ಭಾರೀ ಮಳೆಯಿಂದಾಗಿ ಕಾರ್ಯಕ್ರಮಕ್ಕೆ ಅಡ್ಡಿಯಾಗಿತ್ತು. ಆದರೆ, ಬಳಿಕ ಕಾರ್ಯಕ್ರಮವನ್ನು ಹತ್ತಿರದ ಗುರುದ್ವಾರಕ್ಕೆ ಸ್ಥಳಾಂತರಿಸಲಾಯಿತು.

ಗುರುಗಳ ಮನೆ ಯಾವಾಗಲೂ ಎಲ್ಲಾ ಸಮುದಾಯಗಳಿಗೆ ಮುಕ್ತ ಪ್ರವೇಶವನ್ನು ಹೊಂದಿರುತ್ತದೆ. ಎಲ್ಲರೂ ಒಗ್ಗೂಡಿ, ಕೆಲವೇ ಗಂಟೆಗಳಲ್ಲಿ ಕಾರ್ಯಕ್ರಮಕ್ಕೆ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಎಲ್ಲಾ ಧರ್ಮದವರು ಯಾವುದೇ ಭೇದಭಾವವಿಲ್ಲದೆ ಭಾಗವಹಿಸಿದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!