ಚಂಡೀಗಡ: ಪಂಜಾಬ್ ಶಾಹಿ ಇಮಾಮ್ ಮೌಲಾನ ಹಬೀಬುರ್ರಹ್ಮಾನ್ ಸಾನಿ ಲೂಧಿಯಾನ್ವಿ ಅವರು ಅಲ್ಪಕಾಲದ ಅನಾರೋಗ್ಯದ ಹಿನ್ನೆಲೆಯಲ್ಲಿ ಲೂಧಿಯಾನದ ಖಾಸಗಿ ಆಸ್ಪತ್ರೆ ಕಳೆದ ರಾತ್ರಿ ನಿಧನರಾಗಿದ್ದಾರೆ.
ಅವರಿಗೆ 63 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಓರ್ವ ಪುತ್ರಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಶಾಹಿ ಇಮಾಮ್ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.
ಶಾಹಿ ಇಮಾಮ್ ಯಾವಾಗಲೂ ಜನರ ನಡುವೆ ಪ್ರೀತಿ, ಶಾಂತಿ ಮತ್ತು ಸಾಮರಸ್ಯದ ಸಂದೇಶ ಪ್ರಚಾರ ಪಡಿಸುತ್ತಿದ್ದರು. ಮಾತ್ರವಲ್ಲ ಅವರು ಆಧಾತ್ಮಿಕ ವ್ಯಕ್ತಿತ್ವವನ್ನು ಮೈಗೂಡಿಕೊಂಡಿದ್ದರು ಎಂದು ಅಮರಿಂದರ್ ಸಿಂಗ್ ಸಂತಾಪ ಸೂಚಕದಲ್ಲಿ ತಿಳಿಸಿದ್ದಾರೆ.
ಕುಟುಂಬಕ್ಕೆ ಶಾಹಿ ಇಮಾಮರ ಅಕಾಲಿಕ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿಯೆಂದು ಅವರು ಪ್ರಾರ್ಥಿಸಿದರು.