Home ಟಾಪ್ ಸುದ್ದಿಗಳು ನವೆಂಬರ್ 8 ಕ್ಕೆ ಪಂಜಾಬ್ ನಲ್ಲಿ ವಿಶೇಷ ಅಧಿವೇಶನ: ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ

ನವೆಂಬರ್ 8 ಕ್ಕೆ ಪಂಜಾಬ್ ನಲ್ಲಿ ವಿಶೇಷ ಅಧಿವೇಶನ: ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ

ಅಮೃತಸರ: ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಲು ನವೆಂಬರ್ 8 ರಂದು ಪಂಜಾಬ್ ಸರ್ಕಾರ ವಿಧಾನಸಭೆಯ ವಿಶೇಷ ಅಧಿವೇಶನ ಕರೆದಿದೆ ಎಂದು ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಮಂಗಳವಾರ ಸುದ್ಧಿಗಾರರಿಗೆ ತಿಳಿಸಿದರು.

ಪ್ರಸಕ್ತ ಈ ವಿಶೇಷ ಅಧಿವೇಶನಕ್ಕೆ ಮೊದಲು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತೇವೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು. ಒಂದು ವೇಳೆ ಕೇಂದ್ರ ಸರ್ಕಾರ ಈ ಕಾಯ್ದೆಗಳನ್ನು ರದ್ದುಗೊಳಿಸದಿದ್ದಲ್ಲಿ, ನವೆಂಬರ್ 8 ರ ವಿಶೇಷ ಅಧಿವೇಶನದಲ್ಲಿ ಪಂಜಾಬ್ ಸರ್ಕಾರ ಕಾಯ್ದೆಯ ವಿರುದ್ಧ ನಿರ್ಣಯ ಕೈಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ಒಂದು ವರ್ಷಗಳಿಂದ ದೇಶದ ರೈತಾಪಿವರ್ಗ ಆಂದೋಲನ ನಡೆಸುತ್ತಿದೆ.

Join Whatsapp
Exit mobile version