ಪಂಜಾಬ್: ಉಚ್ಛಾಟಿತ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಭ್ರಷ್ಟಾಚಾರದ ಆರೋಪದಡಿ ಬಂಧನ

Prasthutha|

ಪಂಜಾಬ್: ಗುತ್ತಿಗೆ ಅಧಿಕಾರಿಗಳಿಂದ ಶೇ.1ರಷ್ಟು ಕಮೀಷನ್ ಪಡೆದ ಆರೋಪದಲ್ಲಿ ಪಂಜಾಬ್’ನ ಆರೋಗ್ಯ ಸಚಿವ ಸ್ಥಾನದಿಂದ ವಿಜಯ್ ಸಿಂಗ್ಲಾ ಅವರನ್ನು ಇಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ವಜಾಗೊಳಿಸಿದ್ದರು. ಇದೀಗ ವಿಜಯ್ ಸಿಂಗ್ಲಾರನ್ನು ಭ್ರಷ್ಟಾಚಾರದ ಆರೋಪದಡಿ ಬಂಧಿಸಲಾಗಿದೆ.

- Advertisement -

ಸಿಂಗ್ಲಾ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದೇನೆ ಎಂದು ಮಾನ್ ಇಂದು ವೀಡಿಯೋ ಮೂಲಕ ತಿಳಿಸಿದ್ದರು. ಇದಾದ ಕೆಲವೇ ಗಂಟೆಗಳ ಬಳಿಕ ವಿಜಯ್ ಸಿಂಗ್ಲಾರನ್ನು ಪೊಲೀಸರು ಬಂಧಿಸಿದ್ದಾರೆ. ಡಾ. ಸಿಂಗ್ಲಾ ಅಪರಾಧವನ್ನು ಸ್ವತಃ ಒಪ್ಪಿಕೊಂಡಿದ್ದಾರೆ ಎಂದು ಅವರು ಭಗವಂತ್ ಮಾನ್ ಹೇಳಿದ್ದರು.

ಮಾನ್ಸಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ವಿಜಯ್ ಸಿಂಗ್ಲಾ ತನ್ನ ಇಲಾಖೆಯ ಟೆಂಡರ್‌ಗಳು ಮತ್ತು ಖರೀದಿಗಳಲ್ಲಿ ಸಿಂಗ್ಲಾ ಶೇಕಡಾ 1 ಪರ್ಸೆಂಟ್ ಕಮಿಷನ್‌ಗೆ ಬೇಡಿಕೆಯಿಡುತ್ತಿದ್ದಾರೆ ಎಂದು ತಿಳಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

Join Whatsapp
Exit mobile version