Home ಟಾಪ್ ಸುದ್ದಿಗಳು ಬಿಜೆಪಿ ಅಭ್ಯರ್ಥಿಗೆ ಆಕೆಯ ಕುಟುಂಬವೇ ಮತ ಹಾಕಿಲ್ಲವಂತೆ!

ಬಿಜೆಪಿ ಅಭ್ಯರ್ಥಿಗೆ ಆಕೆಯ ಕುಟುಂಬವೇ ಮತ ಹಾಕಿಲ್ಲವಂತೆ!

ನನ್ನ ಕುಟುಂಬದಲ್ಲಿ 15 ರಿಂದ 20 ಜನರಿದ್ದರೂ ಚುನಾವಣೆಯಲ್ಲಿ ನಾನು ಕೇವಲ 9 ಮತಗಳನ್ನು
ಪಡೆದಿದ್ದೇನೆ
ಎಂದು ಪಂಜಾಬ್ ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿಯ
ಅಭ್ಯರ್ಥಿ ಕಿರಣ್ ಕೌರ್ ಹೇಳಿದ್ದಾರೆ. ಪಂಜಾಬ್‌ನಲ್ಲಿ ಫೆಬ್ರವರಿ
14 ರಂದು ನಡೆದ ನಗರ
ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ನಿನ್ನೆ (ಫೆ.
17) ಪ್ರಕಟವಾಗಿತ್ತು.
 ಈ ಫಲಿತಾಂಶದಲ್ಲಿ ಗುರುದಾಸ್‌ಪುರ ಮುನ್ಸಿಪಲ್ ಕೌನ್ಸಿಲ್‌ನ
12 ನೇ ವಾರ್ಡ್‌ನ
ಬಿಜೆಪಿ ಕಿರಣ್ ಕೌರ್ ಆಕ್ರೋಶ ಹೊರಹಾಕಿದ್ದಾರೆ.

ನನ್ನ ಕುಟುಂಬದ 15ರಿಂದ 20 ಜನರು ನನಗೆ ಮತ ಚಲಾಯಿಸಿದ್ದರೂ ನಾನು ಕೇವಲ 9 ಮತಗಳನ್ನು ಪಡೆದಿದ್ದೇನೆ.
ಮತ ಚಲಾವಣೆಯ ನಂತರ ಕಾಂಗ್ರೆಸ್ ಕಾರ್ಯಕರ್ತರು ಇವಿಎಂ ಅನ್ನು ಬದಲಾಯಿಸಿದ್ದಾರೆ. ನನ್ನ ಏರಿಯಾದ
ಜನರೆಲ್ಲಾ ನನಗೆ ಭರವಸೆ ನೀಡಿದ್ದರು. ನಾನು ಚುನಾವಣೆಯಲ್ಲಿ ಗೆದ್ದಿದ್ದೇನೆ. ಕಾಂಗ್ರೆಸ್ ನನಗೆ
ದ್ರೋಹ ಬಗೆದಿದೆ
ಎಂದು ಆರೋಪಿಸಿದ್ದಾರೆ.

 

ಕಿರಣ್ ಕೌರ್ ಮಾತನಾಡಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಕಾಂಗ್ರೆಸ್ ಪಕ್ಷವು
ಚುನಾವಣೆಯಲ್ಲಿ ಜಾಣತನದಿಂದ ಕೆಲಸ ಮಾಡಿದೆ. ಇತರೆ ಅಭ್ಯರ್ಥಿಗಳಿಗೆ ಕಿರುಕುಳ ನೀಡುತ್ತಿದೆ.
ಇವಿಎಂ ಯಂತ್ರಗಳನ್ನು ಬದಲಿಸುತ್ತಿದೆ
ಎಂದು ಅವರು ತನ್ನನ್ನು ಅಳಲನ್ನು ತೋಡಿಕೊಂಡಿದ್ದಾರೆ. “ಈ ಹಿಂದೆ ಹಲವು ಬಾರಿ
12 ನೇ ವಾರ್ಡ್‌ನಿಂದ ಗೆಲುವು ಸಾಧಿಸಿದ್ದರೂ ಈ ಬಾರಿ ಕೇವಲ ಒಂಬತ್ತು ಮತಗಳನ್ನು
ಪಡೆದಿದ್ದೇನೆ. ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ನನಗೆ ಈ ಚುನಾವಣೆಯಲ್ಲಿ ಕಾಂಗ್ರೆಸ್
ಸಾಕಷ್ಟು ಕಿರುಕುಳ ನೀಡಿದೆ. ನಾನು ಪಾಠ ಮಾಡುತ್ತಿದ್ದ ಶಾಲೆಯಿಂದಲೂ
 ನನ್ನನ್ನು ಹೊರ
ಹಾಕಲಾಗಿದೆ
ಎಂದು ಅವರು ಆರೋಪಿಸಿದ್ದಾರೆ.ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಇವರ
ಆರೋಪವನ್ನು ಕೆಲವರು ಅಲ್ಲಗಳೆದಿದ್ದಾರೆ.
ಇದು ಕೃಷಿ ಕಾನೂನುಗಳ ಪರಿಣಾಮ. ಹಾಗಾಗಿ
ಯಾವೊಬ್ಬ ವ್ಯಕ್ತಿಯೂ ಬಿಜೆಪಿಯ ಪರವಾಗಿದ್ದರೆ
, ಆ ವ್ಯಕ್ತಿಯ ಕುಟುಂಬಸ್ಥರೇ ಅವರನ್ನು
ನಿರಾಕರಿಸುತ್ತಾರೆ ಎಂಬುದಕ್ಕೆ ಇದು ಉದಾಹರಣೆ
ಎಂದಿದ್ದಾರೆ.

 

 

Join Whatsapp
Exit mobile version