ಪುನೀತ್ ಕೆರೆಹಳ್ಳಿ ಜೈಲಿನಿಂದ ಬಿಡುಗಡೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ

Prasthutha|

ಬೆಂಗಳೂರು: ಮಂಡ್ಯದ ಇದ್ರೀಸ್ ಪಾಷಾ ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ವಿರುದ್ಧ ದಾಖಲಿಸಲಾಗಿದ್ದ ಗೂಂಡಾ ಕಾಯ್ದೆಯನ್ನು ಸರ್ಕಾರ ರದ್ದುಪಡಿಸಿದ್ದು, ಆತನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದೆ.

- Advertisement -


ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪುನೀತ್ ಕೆರೆಹಳ್ಳಿ ವಿರುದ್ಧ ಕಳೆದ ಆಗಸ್ಟ್ನಲ್ಲಿ ಕರ್ನಾಟಕ ಸರ್ಕಾರವು ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಲ್ಲದೇ, ಕೂಡಲೇ ಸಿಸಿಬಿ ಪೊಲೀಸರು ಬಂಧಿಸಿ, ಆತನನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು.

ಈ ಬಗ್ಗೆ ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಟ್ವೀಟ್ ಮಾಡಿದ್ದು, ವಾಹ್ ಸಿದ್ರಾಮಣ್ಣ ವಾಹ್….
ಹುಬ್ಬಳ್ಳಿಯ 158 ಮುಸ್ಲಿಂ ಯುವಕರು ಕಲ್ಲು ತೂರಾಟ ಮಾಡಿದರು ಎಂಬ ಕಾರಣಕ್ಕೆ UAPA ಕರಾಳ ಕೇಸು ಹಾಕಿ 1 ವರ್ಷದಿಂದ ಜೈಲಿನಲ್ಲಿ ಆದ್ರೆ ಇದ್ರಿಸ್ ಕೊಲೆಗೈದ ಕೆರೆಹಳ್ಳಿ ಜೈಲಿನಲ್ಲಿ ಇಡಲು ಸಕಾರಣವಿಲ್ಲ – ಕಾಂಗ್ರೆಸ್ ಸರ್ಕಾರ ಎಂದು ಬರೆದುಕೊಂಡಿದ್ದಾರೆ.

- Advertisement -


ಪುನೀತ್ ಕೆರೆಹಳ್ಳಿ ಬಿಡುಗಡೆ ಸರಕಾರದ ನಡೆ ಖಂಡನೀಯ: ವೆಲ್ಫೆರ್ ಪಾರ್ಟಿ
ಪುನೀತ್ ಕೆರೆಹಳ್ಳಿಯನ್ನು ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿಲ್ಲ ಎಂದು ಕರ್ನಾಟಕ ಸರಕಾರದ ಸಲಹಾ ಮಂಡಳಿ ನ್ಯಾಯಾಲಯಕ್ಕೆ ನೀಡಿದ ವರದಿ ಆಶ್ಚರ್ಯಕರವಾಗಿದೆ. ಇದು ಖಂಡನೀಯ ಎಂದು ವೆಲ್ಫೇರ್ ಪಾರ್ಟಿ ರಾಜ್ಯ ಅಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್ ಆಕ್ರೋಶ ವೇಕ್ತಪಡಿಸಿದ್ದಾರೆ.ಹಲವಾರು ಸಮಾಜ ಘಾತುಕ ಕೊಲೆ ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿ ಸರಕಾರಕ್ಕೆ ಅಲ್ಪಸಂಖ್ಯಾತರಿಗೆ ಬಹರಂಗ ಸವಾಲು ನೀಡಿದಂತಹಾ ಓರ್ವ ಆರೋಪಿಯ ರಕ್ಷಣೆಗೆ ಸರಕಾರವೇ ಇಳಿದಿರುವುದು ಅಕ್ಷಮ್ಯ. ಈತನ ಮೇಲೆ ವಿವಿಧ ಠಾಣೆಗಳಲ್ಲಿ ಎಂಟ್ಹತ್ತು ಪ್ರಕರಣಗಳಿದ್ದು ಇತ್ತೀಚೆಗೆ ಮಂಡ್ಯದ ಇದ್ರೀಸ್ ಪಾಷಾ ಹತ್ಯೆಯ ಆರೋಪವೂ ಇದ್ದು ಈತನ ಬಿಡುಗಡೆಗೆ ಸರಕಾರದ ಸಲಹಾ ಮಂಡಳಿ ಸಹಕರಿಸಿರುವುದು ಅನ್ಯಾಯದ ನಡೆಯಾಗಿದೆ. ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಮತ್ತು ತನ್ನ ಸರಕಾರ ರಚನೆಯ ನಂತರ ದಿನವೂ ಅಲ್ಪ ಸಂಖ್ಯಾತರಿಗೆ ರಕ್ಷಣೆ ಮತ್ತು ಕೋಮುವಾದಿಗಳಿಗೆ ಸಮಾಜದಲ್ಲಿ ದ್ವೇಶ ಹರಡುವಂತಹವರಿಗೆ ಕಠಿಣ ಶಿಕ್ಷೆ ಕೊಡುವಂತಹಾ ಭಾಷಣಗಳನ್ನು ಪತ್ರಿಕಾ ಹೇಳಿಕೆಗಳನ್ನು ನಿರಂತರ ಹೇಳುತ್ತಾ ಬರುತ್ತಿರುವಾಗ ಸರಕಾರದ ಈ ನಡೆ ಅದಕ್ಕೆ ತದ್ವಿರುದ್ದವಾಗಿದೆ. ಆದ್ದರಿಂದ ಕಾಂಗ್ರೆಸ್ ಸರಕಾರದ ಬಾಷಣ ಪತ್ರಿಕಾ ಹೇಳಿಕೆಗಳು ಕೇವಲ ಕಾಗದಗಳಿಗೆ ಸೀಮಿತವಾಗದೆ ಸರಿಯಾದ ರೀತಿಯಲ್ಲಿ ಅನುಷ್ಟಾನಕ್ಕೆ ಬರಬೇಕಾಗಿದೆ. ಸರಕಾರದ ಈ ನಡೆಯನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ಘಟಕ ತೀವ್ರವಾಗಿ ಖಂಡಿಸುತ್ತಿದೆ.


ಕಾಂಗ್ರೆಸ್ ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ”ಪುನೀತ್ ಕೆರೇಹಳ್ಳಿ ಬಿಡುಗಡೆ ಪ್ರಕರಣ ರಾಜ್ಯ ಕಾಂಗ್ರೆಸ್ ಸರಕಾರದ ಜಾತ್ಯಾತೀತತೆ ನಿಲುವಿನ ಮೇಲಿನ ಬದ್ದತೆಯನ್ನು ಪ್ರಶ್ನಾರ್ಹಗೊಳಿಸಿದೆ. ಸರಕಾರದ, ಮುಖ್ಯಮಂತ್ರಿಗಳ ಸಲಹಾ ಮಂಡಳಿ, ಸರಕಾರದ ಪ್ರಧಾನ ಅಧಿಕಾರಿಗಳು ಕೋಮುವಾದಿಗಳ ಹಿಡಿತದಲ್ಲಿ ಇದ್ದಂತಿದೆ. ಇದ್ರಿಸ್ ಪಾಷಾ, ಫಾಝಿಲ್ ಕೊಲೆ ಪ್ರಕರಣಗಳ ಮುಂದುವರಿದ ತನಿಖೆ ನಡೆಸುವ ಬದಲಿಗೆ ಕೋಮುವಾದಿ ಅಪರಾಧಿಗಳಿಗೆ ಜಾಮೀನು ಕೊಡಿಸಲು ಸರಕಾರ ಹೆಚ್ಚು ಆಸಕ್ತವಾಗಿರುವಂತಿದೆ. ಚೈತ್ರ ಕುಂದಾಪುರ ಪ್ರಕರಣವನ್ನೂ ಆಳ ತನಿಖೆಗೆ ಸರಕಾರ ಮನಸ್ಸು ಮಾಡುವುದು ಅನುಮಾನಾಸ್ಪದ” ಎಂದು ಬರೆದುಕೊಂಡಿದ್ದಾರೆ.