Home ಟಾಪ್ ಸುದ್ದಿಗಳು ವರ್ಷಗಳ ಹಿಂದೆ ನಾನು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದೆ ಎಂದು ಒಪ್ಪಿಕೊಂಡ ಪುನೀತ್ ಕೆರೆಹಳ್ಳಿ: ಬೆಳಕಿಗೆ ಬಂದ...

ವರ್ಷಗಳ ಹಿಂದೆ ನಾನು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದೆ ಎಂದು ಒಪ್ಪಿಕೊಂಡ ಪುನೀತ್ ಕೆರೆಹಳ್ಳಿ: ಬೆಳಕಿಗೆ ಬಂದ ಹಿಂದೂ ರಕ್ಷಕನ ಪಿಂಪ್ ಗಿರಿ

ಬೆಂಗಳೂರು: ರಾಷ್ಟ್ರ ರಕ್ಷಣಾ ಪಡೆ ಮುಖ್ಯಸ್ಥ ಮತ್ತು ಹಿಂದುತ್ವವಾದಿ ಪುನೀತ್ ಕೆರೆಹಳ್ಳಿ ವಿರುದ್ಧದ ಡಿ.ಜೆ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ FIR ಪ್ರತಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಅದನ್ನು ಸ್ವತ ಪುನೀತ್ ಕೆರೆಹಳ್ಳಿ ಒಪ್ಪಿಕೊಂಡಿದ್ದಾನೆ.

ಹಲಾಲ್ ವಿರುದ್ಧ ಅಭಿಯಾನ, ಕ್ರಿಶ್ಚಿಯನ್ ಮಿಷನರಿ ಹೀಗೆ ಸದಾ ಅನ್ಯ ಧರ್ಮದ ವಿರುದ್ಧ ಕಿಡಿಕಾರಿ ಸ್ವಯಂ ಹಿಂದೂ ರಕ್ಷಕ ಎಂದು ಬಿಂಬಿಸಿಕೊಳ್ಳುತ್ತಿದ್ದ ಪುನೀತ್ ಕೆರೆಹಳ್ಳಿ ವರ್ಷಗಳ ಹಿಂದೆ ವೇಶ್ಯಾವಾಟಿಕೆ ದಂಧೆಯಲ್ಲಿ ಸಕ್ರಿಯನಾಗಿದ್ದನು ಎನ್ನಲಾಗಿದೆ, ಹಲವಾರು ಹಿಂದೂ ಯುವತಿಯರನ್ನು ದಂಧೆಗೆ ತಳ್ಳುತ್ತಿದ್ದು ಈತನ ವಿರುದ್ಧ ನಾಲ್ವರು ನೊಂದ ಯುವತಿಯರು ಡಿಜೆಹಳ್ಳಿಯಲ್ಲಿ ದೂರು ಕೂಡಾ ದಾಖಲಿಸಿದ್ದಾರೆ.

ಈ ಪ್ರಕರಣವನ್ನು ಪುನೀತ್ ಸದ್ಯ ಅಲ್ಲಗಳೆದು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದನಾದರೂ ಇದೀಗ ಈತ ಮತ್ತು ಈತನ ಸಂಗಡಿಗ ಭರತ್ ಶೆಟ್ಟಿ ಮಾತಾಡುವ ಆಡಿಯೋ ವೈರಲ್ ಆಗುತ್ತಿದ್ದು ಅದರಲ್ಲಿ ನಾನು ಹಿಂದೂ ಪರ ಹೋರಾಟ ರಂಗಕ್ಕೆ ಬರುವ ಮುನ್ನ ವೇಶ್ಯಾವಾಟಿಕೆ ದಂಧೆ ನಡೆಸಿದ್ದು ಹೌದು,ಆದರೆ ಈಗ ಅದೆಲ್ಲವೂ ಬಿಟ್ಟಿದ್ದೇನೆ ಎಂದು ಸಮಜಾಯಿಸಿಕೊಂಡಿದ್ದಾನೆ.

ಹಿಂದೂ ರಕ್ಷಣೆ , ಹಿಂದೂ ಸಂಸ್ಕ್ರತಿ ಎಂದೆಲ್ಲಾ ಮಾತಾಡುವ ಹಿಂದೂ ರಕ್ಷಕನ ಭೂತಕಾಲ ಕಂಡು ಇದೀಗ ರಾಷ್ಟ್ರ ರಕ್ಷಣಾ ಪಡೆಯ ಸದಸ್ಯರು ಮತ್ತು ಹಿಂದೂ ಕಾರ್ಯಕರ್ತರು ತೀವ್ರ ಮುಜುಗರಕ್ಕೀಡಾಗಿದ್ದು ಪುನೀತ್ ಕೆರೆಹಳ್ಳಿಯನ್ನು ಸಾಮಾಜಿಕ ರಂಗದಿಂದ ದೂರವಿಡುವ ಚಿಂತನೆಯಲ್ಲಿದ್ದಾರೆ

Join Whatsapp
Exit mobile version