ಪುಣೆ: ಅಫೀಮು ಗಾಂಜಾವನ್ನು ತಮ್ಮ ಜಮೀನಿನಲ್ಲಿ ನೆಟ್ಟ ಆರೋಪದ ಮೇಲೆ ಇಂದಾಪುರದ ಇಬ್ಬರು ರೈತರ ವಿರುದ್ಧ ಪುಣೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇಬ್ಬರು ಆರೋಪಿಗಳು ಪುಣೆ ಜಿಲ್ಲೆಯ ಇಂದಾಪುರ ತಾಲೂಕಿನ ವರ್ಕುಟೆ ಬುದ್ರುಕ್ ಗ್ರಾಮದ ನಿವಾಸಿಗಳಾದ ಪಾಂಡುರಂಗ ನಾಮದೇವ್ ಕುಂಬಾರ್ ಮತ್ತು ನವನಾಥ್ ಗಣಪತ್ ಶಿಂಧೆ ಎಂದು ಗುರುತಿಸಲಾಗಿದೆ.
ಆರೋಪಿಗಳು ತಮ್ಮ ಜಮೀನಿನಲ್ಲಿ ಕಡಲೆ ಮತ್ತು ಬೆಳ್ಳುಳ್ಳಿ ಗಿಡಗಳ ನಡುವೆ ಅಕ್ರಮವಾಗಿ ನಿಷೇಧಿತ ಅಫೀಮುಗಳನ್ನು ನೆಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸುಳಿವಿನ ಮೇರೆಗೆ ಪೊಲೀಸ್ ತಂಡವು ವರ್ಕುಟೆ ಬುದ್ರುಕ್ ನಲ್ಲಿರುವ ಕುಂಬಾರ್ ಮತ್ತು ಶಿಂಧೆ ಜಮೀನಿನ ಮೇಲೆ ದಾಳಿ ನಡೆಸಿತು. ನಾರ್ಕೋಟಿಕ್ಸ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ ಸ್ಟೆನ್ಸ್ (ಎನ್ ಡಿಪಿಎಸ್) ಕಾಯ್ದೆಯ ಸೆಕ್ಷನ್ ಗಳ ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ಇಂದಾಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಟಿ ವೈ ಮುಜಾವರ್ ತಿಳಿಸಿದ್ದಾರೆ.
ದಾಳಿಯಲ್ಲಿ ಕೃಷಿ ಭೂಮಿಯಿಂದ ಅಂದಾಜು 2.11 ಲಕ್ಷ ರೂ.ಗಳ 1,100 ಅಫೀಮು ಗಿಡಗಳನ್ನು ವಶಪಡಿಸಿಕೊಂಡಿದ್ದು, ಹೆಚ್ಚಿನ ವ್ಯಕ್ತಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ ಎಂದು ತಿಳಿಯಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೋಲಿಸರು ತಿಳಿಸಿದ್ದಾರೆ.