ಪುಣೆ ಪೋರ್ಷೆ ಕಾರು ಅಪಘಾತ: ಅಪ್ರಾಪ್ತ ಮಗನಿಗೆ ಕಾರು ನೀಡಿದ ಬಿಲ್ಡರ್ ನ್ಯಾಯಾಂಗ ಬಂಧನಕ್ಕೆ

Prasthutha|

ಪುಣೆ: ಅಪ್ರಾಪ್ತ ವಯಸ್ಸಿನ ಮಗನಿಗೆ ಚಲಾಯಿಸಲು ಐಷಾರಾಮಿ ಕಾರು ನೀಡಿ ಇಬ್ಬರು ಸಾಫ್ಟ್​ವೇರ್​ ಎಂಜಿನಿಯರ್‌ಗಳ ಸಾವಿಗೆ ಕಾರಣನಾಗಿದ್ದ ರಿಯಲ್ ಎಸ್ಟೇಟ್ ಉದ್ಯಮಿ ವಿಶಾಲ್ ಅಗರವಾಲ್‌ನನ್ನು ಸ್ಥಳೀಯ ಸೆಷನ್ಸ್​ ನ್ಯಾಯಾಲಯ 2 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.

- Advertisement -

ವಿಶಾಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಅದರ ಬೆನ್ನಲ್ಲೇ ವಿಶಾಲ್​ ಅಗರವಾಲ್​ ನಾಪತ್ತೆಯಾಗಿದ್ದ. ಅಲ್ಲದೆ, ಪೊಲೀಸರನ್ನು ದಿಕ್ಕು ತಪ್ಪಿಸಲು ತಂತ್ರಗಳನ್ನು ರೂಪಿಸಿದ್ದ. ತನ್ನ ಕಾರಿನಲ್ಲಿ ಮನೆಯಿಂದ ಹೊರ ಹೋಗಿದ್ದ ಆತ, ಮುಂಬಯಿ ಕಡೆ ರಸ್ತೆಗೆ ತೆರಳುವಂತೆ ತನ್ನ ಚಾಲಕನಿಗೆ ಸೂಚಿಸಿದ್ದ. ತನ್ನ ಇನ್ನೊಂದು ಕಾರಿನಲ್ಲಿ ಗೋವಾಕ್ಕೆ ಹೋಗುವಂತೆ ಮತ್ತೊಬ್ಬ ಚಾಲಕನಿಗೆ ಹೇಳಿದ್ದ. ಮುಂಬಯಿಗೆ ಹೋಗುವ ಮಾರ್ಗದಲ್ಲಿ ತನ್ನ ಕಾರಿನಿಂದ ಇಳಿದು, ಸ್ನೇಹಿತ ಕಳಿಸಿದ್ದ ಮತ್ತೊಂದು ಕಾರು ಏರಿ ಛತ್ರಪತಿ ಸಂಭಾಜಿನಗರದ ಕಡೆಗೆ ಹೊರಟಿದ್ದ.

ಪೊಲೀಸರಿಂದ ತಪ್ಪಿಸಿಕೊಳ್ಳಲು ಸಿನಿಮೀಯ ರೀತಿಯಲ್ಲಿ ಯೋಜನೆಗಳನ್ನು ರೂಪಿಸಿದ್ದನಾದರೂ ಪೊಲೀಸರ ಕಣ್ಣಿಗೆ ಮಣ್ಣೆರಚಲು ಆಗಲಿಲ್ಲ. ಆತನನ್ನು ಬಂಧಿಸಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.

- Advertisement -

ಇದರ ಮಧ್ಯೆ, ಶಿವಾಜಿನಗರ ಪ್ರದೇಶದ ನ್ಯಾಯಾಲಯ ಸಂಕೀರ್ಣಕ್ಕೆ ಕರೆತರುತ್ತಿದ್ದಾಗ ಆತನ ಬೆಂಬಲಿಗರು ಪೊಲೀಸ್ ವಾಹನಕ್ಕೆ ಮಸಿ ಎರಚಿ ಬಿಡಿಸಿಕೊಳ್ಳಲು ಪ್ರಯತ್ನಿಸಲಾಗಿತ್ತು.

ಪೋರ್ಷೆ ಕಾರನ್ನು ವಿಶಾಲ್ ಅಗರ್ವಾಲ್‌ನ 17 ವರ್ಷದ ಪುತ್ರ ಮದ್ಯಪಾನ ಮಾಡಿ ಚಾಲನೆ ಮಾಡಿದ್ದನು. ಅದ್ದಾದಿಡ್ಡಿ ಚಾಲನೆಯಿಂದಾಗಿ ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳು ಬಲಿಯಾಗಿದ್ದರು.

Join Whatsapp
Exit mobile version