ಪುಣೆ | ಐಷಾರಾಮಿ ಕಾರು ಡಿಕ್ಕಿ: ಬೈಕ್ ನಲ್ಲಿ ಹೋಗುತ್ತಿದ್ದ ಆಹಾರ ವಿತರಕ ಸಾವು

Prasthutha|

ಪುಣೆ: ಐಷಾರಾಮಿ ಕಾರು ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಪುಣೆಯ ಮುಂಧ್ವಾ ಪ್ರದೇಶದಲ್ಲಿ ಗುರುವಾರ ತಡರಾತ್ರಿ ನಡೆದಿದೆ.

- Advertisement -


ಮೃತ ವ್ಯಕ್ತಿಯನ್ನು ಮೃತ ರೌವೂಫ್ ಶೇಖ್ ಎಂದು ಗುರುತಿಸಲಾಗಿದೆ. ಅವರು ಆಹಾರ ವಿತರಕನಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.


ಅವಘಡ ಸಂಭವಿಸಿದ ತಕ್ಷಣವೇ ಕಾರು ಚಾಲಕ ಪರಾರಿಯಾಗಿದ್ದ. ಆದರೆ, ನಂತರ ಆತನನ್ನು ಬಂಧಿಸಲಾಗಿದೆ.

- Advertisement -


‘ಕಾರು, ಮಧ್ಯರಾತ್ರಿ 1.35ರ ಸುಮಾರಿಗೆ ಮತ್ತೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ, ಅದರಲ್ಲಿದ್ದ (ಬೈಕ್ ನಲ್ಲಿದ್ದ) ಮೂವರು ಗಾಯಗೊಂಡಿದ್ದರು. ನಂತರ, ಶೇಖ್ ಅವರ ಬೈಕ್ ಗೆ ಕಾರು ಹಿಂಬದಿಯಿಂದ ಗುದ್ದಿತ್ತು. ಇದರಿಂದಾಗಿ, ಅವರು ಗಂಭೀರ ಗಾಯಗೊಂಡಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತಪಡಿಸಿದರು. ಘಟನೆಯ ನಂತರ ಆರೋಪಿ ಆಯುಷ್ ತಯಾಲ್ ಪರಾರಿಯಾಗಿದ್ದ. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆತನ ಬೆನ್ನತ್ತಿದ್ದ ಪೊಲೀಸರು, ಹಡಪ್ಸರ ಪ್ರದೇಶದಲ್ಲಿ ಬಂಧಿಸಿದ್ದಾರೆ. ಈ ಸಂಬಂಧ ಮುಂಡ್ವಾ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ’ ಎಂದು ಪುಣೆಯ ಎಸಿಪಿ ಮನೋಜ್ ಪಾಟೀಲ್ ತಿಳಿಸಿದ್ದಾರೆ.



Join Whatsapp