Home ಟಾಪ್ ಸುದ್ದಿಗಳು ಪುಣೆ ಅಪಘಾತ ಪ್ರಕರಣ | ಸಾಕ್ಷ್ಯ ನಾಶ ಆರೋಪ: ಇಬ್ಬರು ವೈದ್ಯರ ಬಂಧನ

ಪುಣೆ ಅಪಘಾತ ಪ್ರಕರಣ | ಸಾಕ್ಷ್ಯ ನಾಶ ಆರೋಪ: ಇಬ್ಬರು ವೈದ್ಯರ ಬಂಧನ

ಪುಣೆ: ಪುಣೆಯಲ್ಲಿ ನಡೆದ ಪೋಶೆ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಾಲಕನ ರಕ್ತದ ಮಾದರಿಯನ್ನು ತಿರುಚಿ ಸಾಕ್ಷ್ಯ ನಾಶಪಡಿಸಿದ ಆರೋಪದ ಮೇಲೆ ಇಲ್ಲಿನ ಸಸೂನ್ ಜನರಲ್ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.


ಡಾ. ಅಜಯ್ ತಾವರೆ ಮತ್ತು ಶ್ರೀಹರಿ ಹಾರ್ನರ್ ಬಂಧಿತರು. ಸದ್ಯ ಈ ಪ್ರಕರಣವನ್ನು ಅಪರಾಧ ವಿಭಾಗದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಮೇ 19 ರಂದು ಪುಣೆಯ ಉದ್ಯಮಿಯೊಬ್ಬರ 17 ವರ್ಷದ ಮಗ ದುಬಾರಿ ಪೋಶೆ ಕಾರು ಚಲಾಯಿಸಿ ಬೈಕ್ಗೆ ಡಿಕ್ಕಿ ಹೊಡೆಸಿದ್ದ, ಅಪಘಾತದಲ್ಲಿ ಇಬ್ಬರು ಐಟಿ ಉದ್ಯೋಗಿಗಳು ಮೃತಪಟ್ಟಿದ್ದರು. ಕಾರು ಚಲಾಯಿಸುವ ವೇಳೆ ಬಾಲಕ ಪಾನಮತ್ತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.


ಪ್ರಕರಣದಲ್ಲಿ ಆರೋಪಿ ಬಾಲಕನ ತಂದೆ ಮತ್ತು ಅಜ್ಜನನ್ನು ಪೊಲೀಸರು ಬಂಧಿಸಿದ್ದಾರೆ.

Join Whatsapp
Exit mobile version