Home ಕರಾವಳಿ ಪಂಪ್ ವೆಲ್ ಸರ್ಕಲ್ ಜಲಾವೃತ : ರಸ್ತೆ ಚರಂಡಿ ಬಗ್ಗೆ ಮಾತನಾಡಬೇಡಿ, ಲವ್ ಜಿಹಾದ್ ಬಗ್ಗೆ...

ಪಂಪ್ ವೆಲ್ ಸರ್ಕಲ್ ಜಲಾವೃತ : ರಸ್ತೆ ಚರಂಡಿ ಬಗ್ಗೆ ಮಾತನಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದಿದ್ದ ಸಂಸದ ಕಟೀಲ್ ವಿರುದ್ಧ ವ್ಯಾಪಕ ಟ್ರೋಲ್

ಮಂಗಳೂರು: ಕಳೆದೆರಡು ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಪಂಪ್ ವೆಲ್ ಫ್ಲೈಓವರ್ ಪ್ರದೇಶ ಜಲಾವೃತವಾಗಿದೆ.

ಇದೇ ಹೊತ್ತಲ್ಲಿ ದಕ್ಷಿಣ ಕನ್ನಡ ಸಂಸದರೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಭಾಷಣದ ತುಣುಕೊಂದು ಮುನ್ನಲೆಗೆ ಬಂದಿದ್ದು, ಸಂಸದ ಕಟೀಲ್ ಅವರು ವ್ಯಾಪಾಕ ಟೀಕೆ ಮತ್ತು ಟ್ರೋಲ್ ಗೆ ಒಳಗಾಗಿದ್ದಾರೆ.


ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಮಂಗಳೂರಿನಲ್ಲಿ ನಡೆದ ಬಿಜೆಪಿ ಪಕ್ಷದ ಸಭೆಯೊಂದರಲ್ಲಿ ಮಾತನಾಡಿದ್ದ ಕಟೀಲ್ ಅವರು `ನೀವು ರಸ್ತೆ, ಚರಂಡಿ ಯಂತಹ ಸಣ್ಣ ವಿಚಾರದ ಬಗ್ಗೆ ಮಾತನಾಡಬೇಡಿ. ನಿಮ್ಮ ಮಕ್ಕಳ ಬದುಕಿನ ಭವಿಷ್ಯದ ಪ್ರಶ್ನೆ, ಲವ್ ಜಿಹಾದ್ ನಿಲ್ಲಿಸಬೇಕಾದರೆ ಭಾರತೀಯ ಜನತಾ ಪಾರ್ಟಿಯೇ ಬೇಕು ಎಂದು ಜನರಿಗೆ ಮನವರಿಕೆ ಮಾಡಿ’ ಎಂದು ಪಕ್ಷದ ಕಾರ್ಯಕರ್ತರಿಗೆ ಸೂಚನೆ ಕೊಟ್ಟಿದ್ದರು.


ಇವತ್ತು ಭಾರಿ ಮಳೆಗೆ ಮಂಗಳೂರಿನ ಪಂಪ್ ವೆಲ್ ಸೇರಿದಂತೆ ನಗರದ ಹಲವೆಡೆ ಮಳೆ ನೀರಿನ ಸಮಸ್ಯೆ ಎದುರಾಗಿದ್ದು, ಸರಿಯಾದ ಚರಂಡಿ ಮತ್ತು ರಸ್ತೆಯ ವ್ಯವಸ್ಥೆ ಇಲ್ಲದಿರುವುದರಿಂದ ಜನರು ಪರದಾಡುವಂತಾಗಿದೆ.

ಈ ವೀಡಿಯೋಗಳಿಗೆ ಹಿನ್ನೆಲೆಯಾಗಿ ಕಟೀಲ್ ಅವರ ಭಾಷಣವನ್ನು ಜೋಡಿಸಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Join Whatsapp
Exit mobile version