Home ಕರಾವಳಿ ಪುದು ಗ್ರಾಪಂ ಚುನಾವಣೆ: ಇದುವರೆಗೆ SDPI ಬೆಂಬಲಿತ ನಾಲ್ವರು ಅಭ್ಯರ್ಥಿಗಳ ಗೆಲುವು

ಪುದು ಗ್ರಾಪಂ ಚುನಾವಣೆ: ಇದುವರೆಗೆ SDPI ಬೆಂಬಲಿತ ನಾಲ್ವರು ಅಭ್ಯರ್ಥಿಗಳ ಗೆಲುವು

ಬಂಟ್ವಾಳ: ಇದೇ ತಿಂಗಳ 25ರಂದು ಪುದು ಗ್ರಾಮ ಪಂಚಾಯತ್’ 34 ವಾರ್ಡ್’ಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಇದುವರೆಗಿನ ಫಲಿತಾಂಶದಂತೆ ಎಸ್’ಡಿಪಿಐ 4 ಸ್ಥಾನಗಳನ್ನು ಗೆಲ್ಲುವ ಮೂಲಕ ಅಭೂತಪೂರ್ವ ಸಾಧನೆಗೈದಿದೆ.


2ನೇ ವಾರ್ಡ್’ನಲ್ಲಿ ಎಸ್’ಡಿಪಿಐ ಬೆಂಬಲಿತ ಅಭ್ಯರ್ಥಿ ಮುಹಮ್ಮದ್ ಶಾಫಿ 444 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ.


ಕುಂಪನಮಜಲ್ ವಾರ್ಡ್ ನಂಬರ್ ಒಂದರಲ್ಲಿ ಎಸ್ ಡಿ ಪಿ ಐ ಬೆಂಬಲಿತ ಖೈರುನ್ನಿಸಾ 477, ನವೀನ್ ಸಾಲ್ದಾನ 436, ರುಕ್ಸಾನಾ ಸಲಾಂ 479 ಮತಗಳನ್ನು ಗಳಿಸುವ ಮೂಲಕ ಗೆಲುವು ಸಾಧಿಸಿದ್ದಾರೆ.

ಅಮೆಮಾರ್ ಮೂರನೇ ವಾರ್ಡ್’ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಅಬ್ದುಲ್ ರಝಾಕ್, ಮುಹಮ್ಮದ್ ಅನಸ್, ನೆಬಿಸ, ರುಕ್ಸನಾ ಹಾಗೂ ನೆಬಿಸ ಬಾನು ಜಯಗಳಿಸಿದ್ದಾರೆ.
ಉಳಿದ ವಾರ್ಡ್’ಗಳಲ್ಲಿ ಮತ ಎಣಿಗೆ ಪ್ರಗತಿಯಲ್ಲಿದ್ದು, ಕೆಲವೇ ಕ್ಷಣಗಳಲ್ಲಿ ಪೂರ್ಣ ಫಲಿತಾಂಶ ಪ್ರಕಟಗೊಳ್ಳಲಿದೆ.

Join Whatsapp
Exit mobile version