ಕ್ಯಾನ್ಸರ್ ಪೀಡಿತರ ಭಾವನೆಗಳ ಜೊತೆ ಆಟ ಬೇಡ: ಪೂನಂ ವಿರುದ್ಧ ಭುಗಿಲೆದ್ದ ಜನಾಕ್ರೋಶ

Prasthutha|

ನವದೆಹಲಿ: ಗರ್ಭಕಂಠದ ಕ್ಯಾನ್ಸರ್ ಜಾಗೃತಿಗಾಗಿ ನಿನ್ನೆಯಷ್ಟೇ ಸತ್ತಿರುವುದಾಗಿ ಹುಚ್ಚಾಟ ಮಾಡಿರುವ ಬಾಲಿವುಡ್ ನಟಿ ಪೂನಂ ಪಾಂಡೆ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ. ಇದು ಜಾಗೃತಿಯಲ್ಲ, ಆಕೆ ಮಾಡಿರೋ ಹುಚ್ಚಾಟ ಎಂದು ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಪೋಸ್ಟ್ ಹಾಕುತ್ತಿದ್ದಾರೆ.

- Advertisement -


ಇಂದು ಬೆಳಗ್ಗೆ ಅದೇ ಇನ್ಸ್ಟಾ ಪೇಜ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿರುವ ಪೂನಂ, ಇದೊಂದು ಜಾಗೃತಿಗಾಗಿ ಮಾಡಿರುವ ಗಿಮಿಕ್ ಎಂದು ಒಪ್ಪಿಕೊಂಡಿದ್ದಾರೆ. ಗಿಮಿಕ್ ಮಾಡಿ ಐಯಾಮ್ ಸಾರಿ ಎಂದೂ ಕೇಳಿದ್ದಾರೆ. ಈ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಪೂನಂ ವಿರುದ್ಧ ಕಾನೂನು ಕ್ರಮಕ್ಕೆ ಅನೇಕರು ಆಗ್ರಹ ಮಾಡಿದ್ದಾರೆ.


ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಪೂನಂ ಉದ್ದೇಶವನ್ನು ಪ್ರಶಂಸಿಸಿರುವ ನೆಟ್ಟಿಗರು ಅವರು ಆಯ್ಕೆ ಮಾಡಿರುವ ಮಾರ್ಗವನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ರೀತಿಯ ನಡೆಗಳು ಒಬ್ಬರಿಗಿರುವ ಪ್ರಚಾರದ ಹುಚ್ಚನ್ನು ತೋರಿಸುವುದಲ್ಲದೇ, ಕಾಯಿಲೆಯ ಗಂಭೀರತೆಯೇ ಅರಿವಿಲ್ಲ ಹಾಗೂ ನಿರ್ಲಕ್ಷ್ಯ ಭಾವನೆ ಹೊಂದಿರುವುದನ್ನೂ ಸೂಚಿಸುತ್ತದೆ ಎಂದು ಕಿಡಿಕಾರಿದ್ದಾರೆ.



Join Whatsapp