Home ಟಾಪ್ ಸುದ್ದಿಗಳು ಪಬ್​ ಜಿ ಗೇಮ್ ನಲ್ಲಿ ಸೋಲು: ನೇಣಿಗೆ ಶರಣಾದ ಕಾಂಗ್ರೆಸ್​ ಮುಖಂಡನ ಮಗ

ಪಬ್​ ಜಿ ಗೇಮ್ ನಲ್ಲಿ ಸೋಲು: ನೇಣಿಗೆ ಶರಣಾದ ಕಾಂಗ್ರೆಸ್​ ಮುಖಂಡನ ಮಗ

ಮಚಲಿಪಟ್ಟಣಂ: ಪಬ್​ ಜಿ ಗೇಮ್ ಸೋತಿದ್ದಕ್ಕೆ ಬಾಲಕನೋರ್ವ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಮಚಲಿಪಟ್ಟಣಂನಲ್ಲಿ ನಡೆದಿದೆ.

ಬಾಲಕನ ತಂದೆ ಶಾಂತಿರಾಜ್ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರಾಗಿದ್ದಾರೆ.
ಮೃತ ಬಾಲಕ ಪಬ್​ ಜಿ ಆಟಕ್ಕೆ ದಾಸನಾಗಿದ್ದ. ಇಂದು ಕೂಡ ತನ್ನ ಸ್ನೇಹಿತರೊಂದಿಗೆ ಆಟ ಆಡಿದ್ದಾನೆ. ಆದರೆ, ಆಟದಲ್ಲಿ ಸೋತಾಗ ಸ್ನೇಹಿತರು ಅಪಹಾಸ್ಯ ಮಾಡಿದ್ದಾರೆ. ಇದರಿಂದ ಅವಮಾನಗೊಂಡಂತೆ ಆಗಿ ಬಾಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Join Whatsapp
Exit mobile version