Home ಟಾಪ್ ಸುದ್ದಿಗಳು ಪಿಎಸ್ಐ ಅಕ್ರಮ ನೇಮಕಾತಿ ಹಗರಣ: ಅಮೃತ್ ಪೌಲ್ ಗೆ ಜಾಮೀನು  ನಿರಾಕರಣೆ

ಪಿಎಸ್ಐ ಅಕ್ರಮ ನೇಮಕಾತಿ ಹಗರಣ: ಅಮೃತ್ ಪೌಲ್ ಗೆ ಜಾಮೀನು  ನಿರಾಕರಣೆ

ಬೆಂಗಳೂರು:  ಪಿಎಸ್ಐ ಅಕ್ರಮ ನೇಮಕಾತಿ ಹಗರಣದ  ಆರೋಪಿ ಎಡಿಜಿಪಿ ಆಗಿದ್ದ ಅಮೃತ್ ಪೌಲ್ ಗೆ ಜಾಮೀನು ನೀಡಲು ನಗರದ 24ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ನಿರಾಕರಿಸಿದೆ.

ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಅಮೃತ್ ಪೌಲ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಲಕ್ಷ್ಮೀನಾರಾಯಣ ಭಟ್ ಅವರಿದ್ದ ಪೀಠ ಈ ಆದೇಶ ನೀಡಿದೆ.

ಅಮೃತ್ ಪಾಲ್ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದರು. ಪರೀಕ್ಷಾ ಉತ್ತರ ಪತ್ರಿಕೆಗಳನ್ನು ಇರಿಸಲಾಗಿದ್ದ ಸೇಫ್ ಲಾಕರ್ನ ಕೀ, ನೇಮಕಾತಿ ಉಸ್ತುವಾರಿಯಾಗಿದ್ದ ಅಮೃತ್ ಪಾಲ್ ಬಳಿ ಇದ್ದವು. ಆದರೆ, ಅವು ತಮ್ಮ ಅಧೀನ ಅಧಿಕಾರಿಗಳ ಬಳಿಗೆ ಹೋದ ಬಗ್ಗೆ ಅಮೃತ್ ಪಾಲ್ ಸೂಕ್ತ ವಿವರಣೆ ನೀಡಿಲ್ಲ. ಅರ್ಜಿದಾರರು ಎಸಗಿರುವ ಅಪರಾಧ ಕೃತ್ಯವು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಪೀಠವು ಅಭಿಪ್ರಾಯಪಟ್ಟಿದೆ.

ಅಲ್ಲದೆ, ಪ್ರಕರಣದ ಅಕ್ರಮಗಳ ಕುರಿತು ಸಾಕ್ಷಿಗಳು ನೀಡಿರುವ ಹೇಳಿಕೆಯನ್ನು ಮುಖ್ಯ ವಿಚಾರಣೆಯಲ್ಲಿ ಪರೀಕ್ಷಿಸಬೇಕಿದೆ. ಅಮೃತ್ ಪಾಲ್ ಅವರು ರಾಜ್ಯದ ಹಿರಿಯ ಶ್ರೇಣಿ ಅಧಿಕಾರಿಯಾಗಿದ್ದು, ಜಾಮೀನು ಮೇಲೆ ಬಿಡುಗಡೆಯಾದರೆ ಪ್ರಾಸಿಕ್ಯೂಷನ್ ದಾಖಲೆಗಳು ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರುತ ಸಾಧ್ಯತೆ ಇದೆ. ಆದ್ದರಿಂದ ಅವರಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

Join Whatsapp
Exit mobile version