PSI ನೇಮಕಾತಿ ಹಗರಣ: ಮುನ್ನಾಭಾಯ್ ಸ್ಟೈಲ್ನಲ್ಲಿ ಬ್ಲೂ ಟೂತ್ ಉಪಯೋಗಿಸಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿ

Prasthutha|

- Advertisement -

ಬೆಂಗಳೂರು: ಕರ್ನಾಟಕ ಬಿಜೆಪಿ ಸರಕಾರದ ಹಗರಣಗಳಲ್ಲೊಂದಾದ ಪಿಎಸ್‌ಐ ನೇಮಕಾತಿ ಹಗರಣಕ್ಕೆ ಬಿಗ್‌ ಟ್ವಿಸ್‌ ಸಿಕ್ಕಿದ್ದು, ಅಭ್ಯರ್ಥಿಗಳು ಮುನ್ನಾಭಾಯ್’ ಸ್ಟೈಲ್ನಲ್ಲಿ ಪಿಎಸ್‌ಐ ಪರೀಕ್ಷೆ ಬರೆದಿದ್ದರು ಎನ್ನಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿ ವಶದಲ್ಲಿರುವ ಅಫಜಲಪುರ ಶಾಸಕರ ಗನ್‌ಮ್ಯಾನ್ ಹಯ್ಯಾಳ ದೇಸಾಯಿ ‘ಮುನ್ನಾಭಾಯ್ ಎಂಬಿಬಿಎಸ್’ ಚಿತ್ರದ ಮಾದರಿಯಲ್ಲಿ ಪರೀಕ್ಷೆ ಬರೆದಿದ್ದ ಎನ್ನಲಾಗಿದೆ.

‘ಮುನ್ನಾಭಾಯ್ ಎಂಬಿಬಿಎಸ್’ ಚಿತ್ರದಲ್ಲಿ ಎಂಬಿಬಿಎಸ್ ಪರೀಕ್ಷೆ ಪಾಸ್ ಮಾಡಲು ಸಂಜಯ್‌ ದತ್ ಆಯ್ಕೆ ಮಾಡಿಕೊಂಡಿದ್ದ ಬ್ಯೂಟೂತ್ ಡಿವೈಸ್ ಬಳಕೆ ಮಾಡಿದ್ದ ರೀತಿಯಲ್ಲೇ ಹಯ್ಯಾಳ ದೇಸಾಯಿ ಪಿಎಸ್‌ಐ ಎಕ್ಸಾಂ ಬರೆದಿದ್ದ ಎನ್ನಲಾಗಿದೆ.

- Advertisement -

ಹಯ್ಯಾಳ ದೇಸಾಯಿ ಬ್ಯೂಟೂತ್ ಡಿವೈಸ್ ಹಾಕಿಕೊಂಡು ಪರೀಕ್ಷಾ ಕೇಂದ್ರದ ಹೊರಗಿನವವರಿಂದ ಉತ್ತರ ಪಡೆದು ಪರೀಕ್ಷೆ ಬರೆದು ಪಿಎಸ್‌ಐ ಹುದ್ದೆಗೆ ಆಯ್ಕೆ ಆಗಿದ್ದ ಎನ್ನಲಾಗಿದೆ. ಈ ನಡುವೆ ಪ್ರಕರಣ ಸಂಬಂಧ ಇನ್ನಿಬ್ಬರ ಬಂಧನವಾಗಿದ್ದು, ಅಭ್ಯರ್ಥಿ ವೀರೇಶ ಹಾಗೂ ಈತನಿಗೆ ಸಹಾಯ ಮಾಡಿದ್ದ ಅಫಜಲಪುರ ಮೂಲದ ಶರಣಬಸಪ್ಪ ಎಂಬುವರನ್ನು ಬಂಧಿಸಲಾಗಿದೆ. ಈ ಮೂಲಕ ಒಟ್ಟು ಬಂಧಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದ್ದು, ಸಿಐಡಿ ಪೋಲಿಸರು ತನಿಖೆಯನ್ನು ಮುಂದುವರೆಸಿದ್ದಾರೆ.

Join Whatsapp
Exit mobile version