Home ಟಾಪ್ ಸುದ್ದಿಗಳು PSI ಮರು ಪರೀಕ್ಷೆಗೆ ಸಿದ್ಧ: ಪರಮೇಶ್ವರ್‌

PSI ಮರು ಪರೀಕ್ಷೆಗೆ ಸಿದ್ಧ: ಪರಮೇಶ್ವರ್‌

ಧಾರವಾಡ: ಪಿಎಸ್‌ಐ ನೇಮಕಾತಿ ಹಗರಣದ ತನಿಖೆ ನಡೆದಿದ್ದು, ಈಗಾಗಲೇ ಹಿರಿಯ ಪೊಲೀಸ್‌ ಅಧಿಕಾರಿಗಳನ್ನೇ ಬಂಧಿಸಲಾಗಿದೆ. ಈ ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಕೋರ್ಟ್‌ದಿಂದ ಸ್ಪಷ್ಟ ಆದೇಶದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮರು ಪರೀಕ್ಷೆ ನಡೆಸಲು ಸರಕಾರ ಸಿದ್ಧವಿದೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ಪ್ರಕರಣದಲ್ಲಿ ನ್ಯಾಯಾಲಯವು ಸರಕಾರದ ಅಭಿಪ್ರಾಯ ಕೇಳಿದ್ದು, ನಾವು ಮರು ಪರೀಕ್ಷೆ ಮಾಡುವುದಾಗಿ ಸ್ಪಷ್ಟವಾಗಿ ಹೇಳಿದ್ದೇವೆ. ನಮ್ಮ ಅಭಿಪ್ರಾಯವನ್ನು ಪುರಸ್ಕರಿಸಿದರೆ, ನ್ಯಾಯಾಲಯದ ಆದೇಶ ಹೊರಬಿದ್ದ ಒಂದು ತಿಂಗಳಲ್ಲೇ ಪಿಎಸ್‌ಐ ನೇಮಕಾತಿ ಮರು ಪರೀಕ್ಷೆಗೆ ಆದೇಶ ಹೊರಡಿಸಲಾಗುವುದು. ಇನ್ನು 545 ಪಿಎಸ್‌ಐ ನೇಮಕಾತಿ ಹಗರಣ ಆದ ಬಳಿಕ 490 ಪಿಎಸ್‌ಐ ನೇಮಕಾತಿಗೆ ಸಂಬಂಧಿಸಿದಂತೆ ದೈಹಿಕ ಪರೀಕ್ಷೆ ಮುಗಿದಿವೆ. ಆದರೆ ಲಿಖೀತ ಪರೀಕ್ಷೆಗಳು ನಡೆದಿಲ್ಲ. 545 ಪಿಎಸ್‌ಐ ನೇಮಕಾತಿ ಆದ ಮೇಲೆಯೇ ಎರಡನೇ ಬ್ಯಾಚ್‌ನ ಲಿಖಿತ ಪರೀಕ್ಷೆಗಳು ನಡೆಯಲಿವೆ ಎಂದರು.

ಸೌಜನ್ಯಾ ಪ್ರಕರಣದ ಮರು ತನಿಖೆ ಚಿಂತನೆ ಇಲ್ಲ

ಸೌಜನ್ಯಾ ಪ್ರಕರಣದ ಮರು ತನಿಖೆ ಆಗಬೇಕೆಂಬ ಬೇಡಿಕೆ ಸಾರ್ವಜನಿಕ ವಲಯದಲ್ಲಿದೆ. ಈ ಬಗ್ಗೆ ಪರ-ವಿರೋಧವೂ ಇದೆ. ಈಗಾಗಲೇ ಪ್ರಕರಣವು ಕಾನೂನಾತ್ಮಕವಾಗಿ ಮುಗಿದು ಹೋಗಿದ್ದು, ಇದರಲ್ಲಿ ಸರಕಾರ ಏನೂ ಮಾಡಲು ಆಗದು. ಮರು ತನಿಖೆ ಮಾಡುವ ವಿಚಾರ ಸರಕಾರದ ಮುಂದಿಲ್ಲ ಎಂದು ಗೃಹ ಸಚಿವರು ಹೇಳಿದರು.

Join Whatsapp
Exit mobile version