Home ಟಾಪ್ ಸುದ್ದಿಗಳು ಪಿಎಸ್ಐ ಅಕ್ರಮ ನೇಮಕಾತಿ; ಶಾಸಕರ ಗನ್ ಮ್ಯಾನ್ ಸಹಿತ ಇಬ್ಬರು ಅರೆಸ್ಟ್

ಪಿಎಸ್ಐ ಅಕ್ರಮ ನೇಮಕಾತಿ; ಶಾಸಕರ ಗನ್ ಮ್ಯಾನ್ ಸಹಿತ ಇಬ್ಬರು ಅರೆಸ್ಟ್

ಕಲಬುರಗಿ: ಪಿಎಸ್ಐ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಅಫಜಲ್ ಪುರ ಶಾಸಕ ಎಂ.ವೈ.ಪಾಟೀಲ ಅವರ ಗನ್ ಮ್ಯಾನ್ ಹಯ್ಯಾಳಿ  ದೇಸಾಯಿ ಹಾಗೂ ಸಿಎಆರ್ ಪೊಲೀಸ್ ಕಾನ್ ಸ್ಟೆಬಲ್ ರುದ್ರಗೌಡ ಪಾಟೀಲ ಎಂಬವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಶಾಸಕರೊಂದಿಗೆ ಕಾರಿನಲ್ಲಿ ನಗರದ ರಾಮಮಂದಿರ ಬಳಿ ಹೊರಟಿದ್ದಾಗ ಸಿಐಡಿ ಪೊಲೀಸರು ಗನ್ ಮ್ಯಾನ್ ಹಯ್ಯಾಳಿಯನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಗನ್ ಮ್ಯಾನ್ ಹಯ್ಯಾಳಿ ದೇಸಾಯಿ ಪಿಎಸ್ಐ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಆಯ್ಕೆಯಾಗಿದ್ದ ಎಂದು ತಿಳಿದು ಬಂದಿದೆ.

Join Whatsapp
Exit mobile version