Home ಟಾಪ್ ಸುದ್ದಿಗಳು ಶಾಸಕರು ಹಣ ಕೇಳಿದ್ದಕ್ಕೆ ಒತ್ತಡದಿಂದ ಪಿಎಸ್‌ ಐ ಸಾವು: ಇದು ಲೂಟಿ ಸರ್ಕಾರ ಎಂದ ಅಶೋಕ್‌

ಶಾಸಕರು ಹಣ ಕೇಳಿದ್ದಕ್ಕೆ ಒತ್ತಡದಿಂದ ಪಿಎಸ್‌ ಐ ಸಾವು: ಇದು ಲೂಟಿ ಸರ್ಕಾರ ಎಂದ ಅಶೋಕ್‌

ಬೆಂಗಳೂರು: ಶಾಸಕರು ಹಣ ಕೇಳಿದ್ದಕ್ಕೆ ಒತ್ತಡದಿಂದಾಗಿ ಯಾದಗಿರಿ ಪಿಎಸ್‌ ಐ ಪರಶುರಾಮ್‌ ಸಾವನ್ನಪ್ಪಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ್‌ ಕಿಡಿಕಾರಿದ್ದಾರೆ.

ಯಾದಗಿರಿ ಪಿಎಸ್‌ಐ ಪರಶುರಾಮ್‌ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಒತ್ತಡದ ಮೇಲೆಯೇ ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ವರ್ಗಾವಣೆಗೆ ಶಾಸಕರು ಹಣ ಕೇಳಿದ್ದಕ್ಕೆ ಪರಶುರಾಮ್ ಅವರ ಸಾವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸರ್ಕಾರದಲ್ಲಿ ಎಲ್ಲರೂ ಲೂಟಿಗೆ ಇಳಿದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ, ರಾಜೀನಾಮೆ ಕೊಟ್ಟು ಹೋಗಲಿ ಎಂದು ಆಗ್ರಹಿಸಿದರು.

Join Whatsapp
Exit mobile version