ಗೊರಗುಂಟೆಪಾಳ್ಯದಲ್ಲಿ ‘ಮೊಬೈಲ್ ಶೌಚಾಲಯ’ ನಿರ್ಮಿಸಿದ ಪಿಎಸ್ ಐ

Prasthutha|

ಬೆಂಗಳೂರು: ಶೌಚಾಲಯ ಸಮಸ್ಯೆ ಬಗೆಹರಿಸುವಂತೆ ಗೊರಗುಂಟೆಪಾಳ್ಯದಲ್ಲಿ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಪಿಎಸ್ ಐ ಶಾಂತಪ್ಪ ಹಾಗೂ ತಂಡದವರು ತಮ್ಮ ಸ್ವಂತ ಖರ್ಚಿನಲ್ಲೇ ‘ಮೊಬೈಲ್ ಶೌಚಾಲಯ’ ನಿರ್ಮಿಸಿದ್ದಾರೆ.

- Advertisement -

ಗೊರಗುಂಟೆಪಾಳ್ಯದ ಬಸ್ ತಂಗುದಾಣಕ್ಕೆ ಹೊಂದಿಕೊಂಡ ಜಾಗದಲ್ಲಿ ಮೊಬೈಲ್ ಶೌಚಾಲಯ ವಾಹನ ನಿಲ್ಲಿಸಲಾಗಿದ್ದು, ಬುಧವಾರ ಬೆಳಿಗ್ಗೆ ಸಾರ್ವಜನಿಕರ ಉಪಯೋಗಕ್ಕಾಗಿ ತೆರೆದಿಡಲಾಯಿತು. ಮಗಳಮುಖಿಯವರಿಂದ ಶೌಚಾಲಯ ಉದ್ಘಾಟನೆ ನಡೆಸಲಾಯಿತು.

‘ಉತ್ತರ ಕರ್ನಾಟಕದ ಜಿಲ್ಲೆಗಳು ಹಾಗೂ ಉತ್ತರ ಭಾರತದ ರಾಜ್ಯಗಳಿಗೆ ಗೊರಗುಂಟೆಪಾಳ್ಯ ಮಾರ್ಗವಾಗಿ ಬಸ್ ಗಳು ಸಂಚರಿಸುತ್ತವೆ. ಇಂತ ಗೊರಗುಂಟೆಪಾಳ್ಯದಲ್ಲಿ ವ್ಯವಸ್ಥಿತ ಶೌಚಾಲಯ ಇಲ್ಲದಿದ್ದರಿಂದ, ಜನರ ಯಾತನೆ ಅನುಭವಿಸುತ್ತಿದ್ದರು.

- Advertisement -

ಮಹಿಳೆಯರು, ವೃದ್ಧರು ಕಷ್ಟಪಡುತ್ತಿದ್ದರು. ಈ ಸಮಸ್ಯೆ ನಿವಾರಿಸಲು ಹಲವು ಅಭಿಯಾನ ನಡೆಸಿದರೂ ಪ್ರಯೋಜನವಾಗಲಿಲ್ಲ   ಎಂದು ಪಿಎಸ್ ಐ ಶಾಂತಪ್ಪ ಹೇಳಿದರು.

‘ಜಾಗವಿದ್ದರೂ ಮೊಬೈಲ್ ಶೌಚಾಲಯ ಇರಿಸಲು ಬಿಬಿಎಂಪಿ ಆಸಕ್ತಿ ತೋರಲಿಲ್ಲ. ಹೀಗಾಗಿ, ನಾನು ಹಾಗೂ ಕೆಲ ಯುವಕರು ಸೇರಿ ಈ ಶೌಚಾಲಯ ಇರಿಸಿದ್ದೇವೆ. ಇದು ಪ್ರಯಾಣಿಕರಿಗೆ ಅನುಕೂಲ ಆಗಲಿದೆ’ ಎಂದರು.



Join Whatsapp