Home ಟಾಪ್ ಸುದ್ದಿಗಳು ಪಿಎಸ್​ಐ ನೇಮಕಾತಿ ಅಕ್ರಮ; ಏಜೆಂಟ್ ಗಳ ಬಂಧನಕ್ಕೆ ಸಿಐಡಿ ಶೋಧ

ಪಿಎಸ್​ಐ ನೇಮಕಾತಿ ಅಕ್ರಮ; ಏಜೆಂಟ್ ಗಳ ಬಂಧನಕ್ಕೆ ಸಿಐಡಿ ಶೋಧ

ಬೆಂಗಳೂರು: ಪಿಎಸ್​ಐ ನೇಮಕಾತಿ  ಅಕ್ರಮದ ತನಿಖೆಯನ್ನು ತೀವ್ರಗೊಳಿಸಿರುವ ಸಿಐಡಿ‌ ಅಧಿಕಾರಿಗಳು ಪ್ರಕರಣದ ಪ್ರಮುಖ ಆರೋಪಿ ಡಿವೈಎಸ್​ಪಿ ಶಾಂತಕುಮಾರ್ ರನ್ನು ಮತ್ತೆ ಮೂರು ದಿನಗಳ ಕಾಲ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ ಮಾಹಿತಿಯನ್ನು ಸಂಗ್ರಹಿಸ ತೊಡಗಿದ್ದಾರೆ.

ಸಿಐಡಿ ಕಸ್ಟಡಿಗೆ ನೀಡಿದ್ದ ಅವಧಿ ಮುಗಿದಿದ್ದ ಹಿನ್ನೆಲೆಯಲ್ಲಿ ಶಾಂತಕುಮಾರ್ ರನ್ನು ನಗರದ 1ನೇ ಎಸಿಎಂಎಂ ಕೋರ್ಟ್​ಗೆ ಸಿಐಡಿ ಹಾಜರುಪಡಿಸಿತ್ತು. ಸಿಐಡಿ ಪರ ವಕೀಲರ ಮನವಿ ಮೇರೆಗೆ ನ್ಯಾಯಾಲಯವು ಮತ್ತೆ ಮೂರು ದಿನ ಶಾಂತಕುಮಾರ್​ರನ್ನು ಕಸ್ಟಡಿಗೆ ಪಡೆದ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನೇಮಕಾತಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 6 ಮಂದಿಯನ್ನು ಸಿಐಡಿ ಬಂಧಿಸಿದೆ. ಇವರೆಲ್ಲರೂ ನೇಮಕಾತಿ ವಿಭಾಗದ ಡಿವೈಎಸ್​ಪಿ ಶಾಂತಕುಮಾರ್​ ಸೂಚನೆಯಂತೆ ಕೆಲಸ ಮಾಡುತ್ತಿದ್ದರು. ಬಂಧಿತ ಆರು ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ಪೈಕಿ ಎಎಚ್​ಸಿ ಶ್ರೀಧರ್ ಬಳಿ ಸುಮಾರು  2 ಕೋಟಿ ನಗದು ಪತ್ತೆಯಾಗಿತ್ತು. ಹಿರಿಯ ಅಧಿಕಾರಿಗಳ ಸೂಚನೆಯಂತೆ ಹಣ ಪಡೆಯಲಾಗಿತ್ತು ಎಂಬ ಅಂಶವೂ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಕಾರ್ಯಾಚರಣೆ ವೇಳೆ ಐದರಿಂದ ಆರು ಅಭ್ಯರ್ಥಿಗಳಿಗೆ ಸೇರಿದ್ದ ಹಣ ಮಾತ್ರ ಸಿಕ್ಕಿದೆ. ಸಿಐಡಿ ತನಿಖೆ ವೇಳೆ ಇನ್ನಷ್ಟು ಹಣ ಪತ್ತೆಯಾಗುವ ಸಾಧ್ಯತೆಯಿದ್ದು,  ಪ್ರಥಮ ದರ್ಜೆ ಗುಮಾಸ್ತ ಹರ್ಷನ ಮೂಲಕವೂ ಸಾಕಷ್ಟು ಅಕ್ರಮ ನಡೆದಿರುವುದು ತಿಳಿದುಬಂದಿದೆ.

ರಾಜ್ಯದ ಹಲವು ಏಜೆಂಟ್​ಗಳ ಮೂಲಕ ನೇಮಕಾತಿ ವಿಭಾಗಕ್ಕೆ ಹಣ ಪಾವತಿಯಾಗುತ್ತಿತ್ತು ಎಂಬ ಸಂಗತಿ ಸಿಐಡಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಏಜೆಂಟ್​ಗಳ ಮೂಲಕ ನಗದು ರೂಪದಲ್ಲಿ ಹಣ ಚಲಾವಣೆಯಾಗಿದ್ದು, ನೇಮಕಾತಿ ವಿಭಾಗದ ಯಾವ ಅಧಿಕಾರಿಗಳು ಅಭ್ಯರ್ಥಿಗಳಿಂದ ಹಣ ಪಡೆದು ಕೆಲಸ ಮಾಡಿದ್ದಾರೆ ಎಂಬುದನ್ನು ಪತ್ತೆಹಚ್ಚುವುದೇ ಸವಾಲಾಗಿ ಪರಿಗಣಿಮಿಸಿದೆ. ಮತ್ತಷ್ಟು ಆರೋಪಿಗಳಿಗಾಗಿ ಹುಡುಕಾಟ ಮುಂದುವರಿದಿದೆ.

Join Whatsapp
Exit mobile version