ಮಂಗಳೂರು: ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದನಕಾರಿ ಪೋಸ್ಟ್ ಮತ್ತು ಕಮಂಟ್ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಇಲಾಖೆಯ ಸೆನ್ ವಿಭಾಗ ಮತ್ತೆ 12 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದೆ. ಈ ಮೂಲಕ ಒಟ್ಟು ಇದುವರೆಗೂ 17 ಮಂದಿಯ ಮೇಲೆ ಪ್ರಕರಣ ದಾಖಲಿಸಿದಂತಾಗಿದೆ.
ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಕೆಲವೊಂದು ಪ್ರಚೋದನಕಾರಿ ಪೋಸ್ಟ್’ಗಳಾದ ‘ ಕರಾವಳಿಯಲ್ಲಿ ದೊಡ್ಡಮಟ್ಟದ ಕೋಮು ಸಂಘರ್ಷ ಸ್ಫೋಟಗೊಳ್ಳುವ ಸಾಧ್ಯತೆ ಇದೆ, ಪ್ರವೀಣ್ ಕೊಲೆಗೆ ಪ್ರತೀಕಾರವಾಗಿ ಕೊಲೆ ಮಾಡಲು ಕರೆ ನೀಡುವ ಪೋಸ್ಟ್, 48 ಗಂಟೆ ಮಂಗಳೂರಿನಲ್ಲಿ ನಡೆದ ಒಂದು ಕೊಲೆಗೆ ಪ್ರತೀಕಾರವಾಗಿ 10 ಕೊಲೆ ಮಾಡುವುದಾಗಿ ಪೋಸ್ಟ್, ನಿರ್ದಿಷ್ಟ ಜಾತಿ, ಸಮುದಾಯವನ್ನು ಗುರಿಯಾಗಿಸಿ ಹತ್ಯೆಗೆ ಕರೆ ನೀಡುವ ಸಂದೇಶವನ್ನು ಒಳಗೊಂಡಂತೆ ಫೇಸ್’ಬುಕ್ ಪೋಸ್ಟ್, ವಾಟ್ಸಾಪ್ ಚರ್ಚೆ ಮತ್ತು ಕಮೆಂಟ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟನೆಯಲ್ಲಿ ಉಲ್ಲೇಖಿಸಿದೆ.
ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದ್ದು, ಪ್ರಚೋದನಕಾರಿ ಮೆಸೇಜ್ ರವಾನಿಸುವವರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಈ ಕುರಿತು ಕಾರ್ಯಾಚರಣೆಯನ್ನು ಬಿಗಿಗೊಳಿಸಲಾಗುವುದೆಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ದಾಖಲಾದ ಪ್ರಕರಣಗಳ ವಿವರಗಳು ಇಂತಿವೆ: