ಮುಂಬೈ ಖಾಸಗಿ, ಸಾರ್ವಜನಿಕ ವಸತಿ ಸಮುಚ್ಛಯಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ.15 ಮೀಸಲಾತಿಗೆ ಒತ್ತಾಯ

Prasthutha|

ಮುಂಬೈ : ಮುಂಬರುವ ಹೊಸ ವಸತಿ ನೀತಿಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಸತಿ ಸಮುಚ್ಛಯಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ.15 ಮೀಸಲಾತಿ ನೀಡುವಂತೆ ಪ್ರಮುಖ ಮಾನವ ಹಕ್ಕುಗಳ ಹೋರಾಟಗಾರರೊಬ್ಬರು ಒತ್ತಾಯಿಸಿದ್ದಾರೆ. ದೇಶದಲ್ಲಿ ಜಾತ್ಯತೀತ ಮೌಲ್ಯಗಳು ಉಳಿಯಲು ಇದು ಅನಿವಾರ್ಯ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ವಸತಿ ಸಚಿವ ಜಿತೇಂದರ್ ಅವ್ಹಾದ್ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಸೌಹಾರ್ಧ ಪ್ರತಿಷ್ಠಾನದ ಅಧ್ಯಕ್ಷ ಅಬ್ರಹಾಂ ಮಥಾಯ್ ಬರೆದಿರುವ ಪತ್ರದಲ್ಲಿ ಈ ವಿಷಯ ತಿಳಿಸಿದ್ದಾರೆ. ತಾವು 2003ರಲ್ಲಿ ಅಲ್ಪ ಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದಾಗಲೂ ಈ ಸಲಹೆ ನೀಡಿದ್ದೆ ಎಂದು ಅಬ್ರಹಾಂ ತಿಳಿಸಿದ್ದಾರೆ.

- Advertisement -

ಸಮಾಜದಲ್ಲಿ ಕೋಮು ದ್ರುವೀಕರಣದಿಂದಾಗಿ ಅಲ್ಪಸಂಖ್ಯಾತರಿಗೆ ಮನೆಗಳು ಬಾಡಿಗೆ ಸಿಗುತ್ತಿಲ್ಲ. ಬಾಲಿವುಡ್ ನಟ ಇಮ್ರಾನ್ ಹಾಶ್ಮಿಯಂತವರಿಗೇ ಬಾಂದ್ರಾದ ಪ್ರತಿಷ್ಠಿತ ವಸತಿ ಸಮುಚ್ಛಯದಲ್ಲಿ ಮನೆ ನಿರಾಕರಿಸಲಾಗಿತ್ತು ಎಂದು ಅವರು ಗಮನ ಸೆಳೆದಿದ್ದಾರೆ.

ಹೀಗಾಗಿ ಎಲ್ಲಾ ಖಾಸಗಿ ವಸತಿ ವಲಯಗಳಲ್ಲಿ, ಎಂಎಚ್ ಎಡಿಎ, ಸಿಐಡಿಸಿಒ ಮತ್ತು ಇತರ ಸರಕಾರಿ ವಲಯದ ವಸತಿ ಸಮುಚ್ಛಯಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ.15 ಮೀಸಲಾತಿ ಕಲ್ಪಿಸುವಂತೆ ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.

- Advertisement -