Home ಟಾಪ್ ಸುದ್ದಿಗಳು ನವಾಲ್ನಿ ಸಾವಿಗೆ ರಷ್ಯಾದಲ್ಲಿ ಪ್ರತಿಭಟನೆ: ನೂರಾರು ಜನರು ಪೊಲೀಸ್ ವಶ

ನವಾಲ್ನಿ ಸಾವಿಗೆ ರಷ್ಯಾದಲ್ಲಿ ಪ್ರತಿಭಟನೆ: ನೂರಾರು ಜನರು ಪೊಲೀಸ್ ವಶ

ಪಾಟ್ನಾ:ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಟೀಕಾಗಾರರಾಗಿದ್ದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಾಲ್ನಿ ಮೃತಪಟ್ಟ ನಂತರ ದೇಶದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎಂದು ವರದಿಯಾಗಿದೆ. ಅಲೆಕ್ಸಿ ನವಾಲ್ನಿಗೆ ಸಂತಾಪ ಸೂಚಿಸಲು ಹಮ್ಮಿಕೊಂಡಿದ್ದ ಕಾರ್ಯಕ್ರಮ ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ವಿಕೋಪಕ್ಕೆ ತಿರುಗಿದ್ದು, ಜನರ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದಾರೆ.

ನವಾಲ್ನಿ ಪರ ನಡೆಯುತ್ತಿದ್ದ ಹೋರಾಟ ಹಿಂಸೆಗೆ ತಿರುಗಿದ್ದು, ಈ ಸುಮಾರು 500 ಮಂದಿಯನ್ನು ಪೊಲೀಸರು ಜೈಲಿಗೂ ಹಾಕಿದ್ದಾರೆಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ.

ರಷ್ಯಾ ಚುನಾವಣೆಯ ಹೊಸ್ತಿಲಲ್ಲಿದ್ದು, ಪುಟಿನ್ ಅಧ್ಯಕ್ಷರಾಗಿ ಪುನರಾಯ್ಕೆ ಆಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಈ ಸಮಯದಲ್ಲಿ ಅಲೆಕ್ಸಿ ನವಾಲ್ನಿ ಮೃತಪಟ್ಟಿರುವುದು ಭಾರಿ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಜೈಲಿನಲ್ಲೇ ಜೀವ ಬಿಟ್ಟ ನವಾಲ್ನಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ಗಟ್ಟಿಯಾಗಿ, ನಿಂತು ಹೋರಾಡಿದ್ದ ಕೆಲವೇ ನಾಯಕರ ಪೈಕಿ ಒಬ್ಬರು.

ಪುಟಿನ್ ಅವರ ಆಡಳಿತದ ಭ್ರಷ್ಟಾಚಾರ ವಿರುದ್ಧ ಧ್ವನಿ ಎತ್ತುತ್ತಿದ್ದ & ಅಧ್ಯಕ್ಷರ ವಿರುದ್ಧ ಪ್ರತಿಭಟನೆ ನಡೆಸಿದ್ದ ವಿಪಕ್ಷ ನಾಯಕ ಅಲೆಕ್ಸಿ ನವಾಲ್ನಿ ಈಗ ಮೃತಪಟ್ಟಿದ್ದು ಸಂಚಲನ ಸೃಷ್ಟಿಸಿದೆ. ರಷ್ಯಾ ಪರಿಸ್ಥಿತಿ ಸೂಕ್ಷ್ಮವಾಗಿದೆ. ಇನ್ನು ಮುಂದಿನ ದಿನಗಳಲ್ಲಿ ರಷ್ಯಾದ ಪರಿಸ್ಥಿತಿ ಕೈಮೀರಿ ಹೋಗುವ ಅಪಾಯ ಇದೆ. ಅದರಲ್ಲೂ ರಷ್ಯಾದ ಸಾರ್ವತ್ರಿಕ ಚುನಾವಣೆ ಸಮಯಕ್ಕೆ ಈಗ ರಷ್ಯಾ ಭದ್ರತಾ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಹಾಗೇ ಸೂಕ್ಷ್ಮ ಪ್ರದೇಶಗಳಿಗೆ ಭದ್ರತೆನ ಮತ್ತಷ್ಟು ಹೆಚ್ಚಿಸಿದ್ದಾರೆ. ಪ್ರತಿಭಟನೆಗಳು ಹಾಗೂ ಹೋರಾಟ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.

Join Whatsapp
Exit mobile version