ಅಗ್ನಿಪಥ್ ಯೋಜನೆ ವಿರುದ್ಧ ವ್ಯಾಪಕ ಆಕ್ರೋಶ: ಬಿಹಾರದಲ್ಲಿ ಭುಗಿಲೆದ್ದ ಪ್ರತಿಭಟನೆ, ರೈಲುಗಳ ಮೇಲೆ ಕಲ್ಲು ತೂರಾಟ

Prasthutha|

ನವಾಡಾ: ಕೇಂದ್ರ ಸರ್ಕಾರವು ಸೇನಾ ನೇಮಕಾತಿಗಾಗಿ ಅಗ್ನಿಪಥ್ ಯೋಜನೆಯನ್ನು ಘೋಷಿಸಿದ ನಂತರ ಬಕ್ಸಾರ್, ಬೇಗುಸರಾಯ್ ಮತ್ತು ಮುಜಾಫರ್ ಪುರ ಸೇರಿದಂತೆ ಬಿಹಾರದ ಹಲವೆಡೆ ಪ್ರತಿಭಟನೆಗಳು ಭುಗಿಲೆದ್ದಿದ್ದು, ಯುವಕರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಬಿಹಾರದ ಜೆಹಾನಾಬಾದ್ ಮತ್ತು ನವಾಡಾದಲ್ಲಿ ಯುವ ಪ್ರತಿಭಟನಾಕಾರರು ಸತತ ಎರಡನೇ ದಿನವೂ ರಸ್ತೆಗಿಳಿದಿದ್ದಾರೆ.

ವಿದ್ಯಾರ್ಥಿಗಳು ಮೋದಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ರೈಲು ತಡೆ ನಡೆಸಿದ್ದಾರೆ. ಇಷ್ಟೇ ಅಲ್ಲದೆ, ಅನೇಕ ಸ್ಥಳಗಳಲ್ಲಿ ಹೆದ್ದಾರಿಯಲ್ಲಿ ಟೈರ್ ಗಳನ್ನು ಸಹ ಸುಡಲಾಗಿದೆ, ಇದರಿಂದಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.

- Advertisement -

ಎಲ್ಲಾ ಹೊಸ ಸೈನಿಕರನ್ನು ಕೇವಲ ನಾಲ್ಕು ವರ್ಷಗಳ ಅವಧಿಗೆ ಮಾತ್ರ ನೇಮಕ ಮಾಡಿಕೊಳ್ಳುವ  ಅಗ್ನಿಪಥ್’ ಯೋಜನೆಯನ್ನು ಸರ್ಕಾರ ಮಂಗಳವಾರ ಘೋಷಿಸಿದ್ದು, ಇದು ವೃತ್ತಿಪರತೆ, ನೈತಿಕತೆ ಮತ್ತು ಹೋರಾಟದ ಮನೋಭಾವಕ್ಕೆ ಧಕ್ಕೆ ತರುತ್ತದೆ ಎಂದು ವಾದಿಸಿರುವ ಪ್ರತಿಭಟನಕಾರರು, ನಾಲ್ಕು ವರ್ಷಗಳ ಸೇವಾವಧಿಯು ಯೋಧರನ್ನು ಅಪಾಯಕ್ಕೆ ತಳ್ಳಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version