Home ಟಾಪ್ ಸುದ್ದಿಗಳು ಮಹಾರಾಷ್ಟ್ರ ಶಾಸಕನ ಮನೆ ಮೇಲೆ ಬೆಂಕಿ ಹಚ್ವಿದ ಪ್ರತಿಭಟನಕಾರರು

ಮಹಾರಾಷ್ಟ್ರ ಶಾಸಕನ ಮನೆ ಮೇಲೆ ಬೆಂಕಿ ಹಚ್ವಿದ ಪ್ರತಿಭಟನಕಾರರು

ಮಹಾರಾಷ್ಟ್ರ: ಮರಾಠಾ ಮೀಸಲಾತಿ ಆಂದೋಲನ ತೀವ್ರ ಸ್ವರೂಪ ಪಡೆದುಕೊಂಡಿದಿದ್ದು, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.

ಬೀಡು ಜಿಲ್ಲೆಯ ಮಜಲಗೈನ್‌ನಲ್ಲಿರುವ ಎನ್‌ಸಿಪಿ ಶಾಸಕ ಪ್ರಕಾಶ್‌ ಸೋಲಂಕೆ ಅವರ ಮನೆ ಮೇಲೆ ಸೋಮವಾರ ಬೆಳಗ್ಗೆ ಪ್ರತಿಭಟನಕಾರರು ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿದ್ದಾರೆ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ ನಂತರ ಗುಂಪು ಅವರ ಮನೆಗೆ ಬೆಂಕಿ ಹಚ್ಚಿದೆ. ಅವರ ಮನೆಯಿಂದ ಭಾರೀ ಪ್ರಮಾಣದ ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು.

ಮನೆಗೆ ಬೆಂಕಿ ಹಚ್ಚಿದ ಸಮಯದಲ್ಲಿ ಶಾಸಕರು ಮತ್ತು ಕುಟುಂಬ ಹಾಗೂ ಸಿಬ್ಬಂದಿ ಮನೆಯೊಳಗಡೆಯೇ ಇದ್ದರು. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ಮರಾಠ ಪ್ರತಿಭಟನಕಾರರ ಉಪವಾಸ ಸತ್ಯಾಗ್ರಹದ ವಿರುದ್ಧ ಶಾಸಕರು ಹೇಳಿಕೆ ನೀಡಿದ್ದಕ್ಕಾಗಿ ಆಕ್ರೋಶಗೊಂಡ ಪ್ರತಿಭಟನಕಾರರು ಹಿಂಸಾಚಾರ ನಡೆಸಿದ್ದಾರೆ.

ಎನ್‌ಸಿಪಿ ಶಾಸಕ ಪ್ರಕಾಶ್ ಸೋಲಂಕೆ ಪಕ್ಷದ ಅಜಿತ್ ಪವಾರ್ ವಿಭಾಗಕ್ಕೆ ಸೇರಿದವರು. ಘಟನೆ ನಡೆದ ಬಳಿಕ ಪ್ರದೇಶದಲ್ಲಿ ಆತಂಕ ಮನೆ ಮಾಡಿದೆ.

Join Whatsapp
Exit mobile version