Home ಟಾಪ್ ಸುದ್ದಿಗಳು ಪಿಟಿಸಿಎಲ್ 1978ಕ್ಕೆ ತಿದ್ದುಪಡಿಗೆ ಒತ್ತಾಯಿಸಿ ಸಿಎಂ ಮನೆ ಮುಂದೆ ಪ್ರತಿಭಟನೆ

ಪಿಟಿಸಿಎಲ್ 1978ಕ್ಕೆ ತಿದ್ದುಪಡಿಗೆ ಒತ್ತಾಯಿಸಿ ಸಿಎಂ ಮನೆ ಮುಂದೆ ಪ್ರತಿಭಟನೆ

►►ಶೀಘ್ರವೇ ಕಾಯ್ದೆ ಅನುಷ್ಠಾನಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಎಂ.ಪಿ.ಕುಮಾರಸ್ವಾಮಿ

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ  ಪಿಟಿಸಿಎಲ್  ಜಮೀನು ಪರಭಾರೆ ಕಾಯ್ದೆ 1978ಕ್ಕೆ ತಿದ್ದುಪಡಿ ಮಾಡುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದ ಭೂ ವಂಚಿತರ ಹೋರಾಟ ಸಮಿತಿ ಸದಸ್ಯರನ್ನು ಅನುಸೂಚಿತ ಜಾತಿ, ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಎಂ.ಪಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳ ನಿವಾಸದ ಮುಂಭಾಗದಲ್ಲಿ ಭೇಟಿ ಮಾಡಿ ಶೀಘ್ರದಲ್ಲೇ ಕಾಯ್ದೆ ಅನುಷ್ಠಾನಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ವಿಚಾರವಾಗಿ ಪ್ರತಿಭಟನೆ ವೇಳೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ ಸಮಿತಿ ಅಧ್ಯಕ್ಷ  ಶಾಸಕ ಎಂ.ಪಿ.ಕುಮಾರಸ್ವಾಮಿ,  ಪಿಟಿಸಿಎಲ್ ಕಾಯ್ದೆ 1978ಕ್ಕೆ ಕಾಲಮಿತಿ ಕಾಯ್ದೆ ಅನ್ವಯಿಸದಂತೆ ಕಾಯಿದೆಗೆ ತಿದ್ದುಪಡಿ ತರಬೇಕು, ಅಧಿವೇಶನದಲ್ಲಿ ಮಂಡಿಸಿ ಅನುಮೋದನೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.

 ಈ ಸಂದರ್ಭದಲ್ಲಿ  ಎಲ್ಲಾ ಜಿಲ್ಲೆಯ ಭೂಮಿ ಕಳೆದುಕೊಂಡ ಬಾಧಿತರು, ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು, ಸಮುದಾಯದ ಎಲ್ಲಾ ಮುಖಂಡರು ಹಾಗೂ ಎಲ್ಲಾ ಜಿಲ್ಲೆಯ ಸಮುದಾಯದ ವಕೀಲರು ಹಾಜರಿದ್ದರು

Join Whatsapp
Exit mobile version