Home ಟಾಪ್ ಸುದ್ದಿಗಳು ಹಿಜಾಬ್ ನಿಷೇಧದ ವಿರುದ್ಧ ಕೇರಳದಲ್ಲಿ ಪ್ರತಿಭಟನೆ: ಬಂಧಿತ ಮುಸ್ಲಿಮ್ ವಿದ್ಯಾರ್ಥಿ ಮುಖಂಡರ ಬಿಡುಗಡೆ

ಹಿಜಾಬ್ ನಿಷೇಧದ ವಿರುದ್ಧ ಕೇರಳದಲ್ಲಿ ಪ್ರತಿಭಟನೆ: ಬಂಧಿತ ಮುಸ್ಲಿಮ್ ವಿದ್ಯಾರ್ಥಿ ಮುಖಂಡರ ಬಿಡುಗಡೆ

ಕ್ಯಾಲಿಕಟ್: ಕ್ಯಾಲಿಕಟ್ ಸರ್ಕಾರಿ ಅನುದಾನಿತ ಶಾಲೆಯಲ್ಲಿ ಹಿಜಾಬ್ ನಿಷೇಧವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಬಂಧಿತ SIO ವಿದ್ಯಾರ್ಥಿ ಸಂಘಟನೆಯ 12 ಮುಖಂಡರಿಗೆ ಸ್ಥಳೀಯ ನ್ಯಾಯಾಲಯವು ಜಾಮೀನು ನೀಡಿ ಬಿಡುಗಡೆಗೊಳಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ SIO ರಾಷ್ಟ್ರೀಯ ಸಮಿತಿ ಸದಸ್ಯ ಮುಹಮ್ಮದ್ ಸಯೀದ್ ಟಿ.ಕೆ, ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ತಶ್ರೀಫ್ ಕೆ.ಪಿ, ರಾಜ್ಯ ಸಮಿತಿ ಸದಸ್ಯ ಅಡ್ವಕೇಟ್ ರಹ್ಮಾನ್ ಇರಕ್ಕೂರ್ ಮತ್ತು ರಾಜ್ಯ ಸಹಾಯಕ ಕಾರ್ಯದರ್ಶಿ ಅಸ್ಲಾಹ್ ಕಕ್ಕೋಡಿ ಎಂಬವರನ್ನು 11 ದಿನಗಳ ಹಿಂದೆ ಬಂಧಿಸಲಾಗಿತ್ತು. ಅವರಿಗೆ ಎರಡು ಸಲ ಜಾಮೀನು ನಿರಾಕರಿಸಲಾಗಿತ್ತು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ SIO ಕೇರಳ ರಾಜ್ಯಾಧ್ಯಕ್ಷ ಅಮ್ಜದ್ ಅಲಿ ಇ.ಎಮ್, ಜಾಮೀನು ನೀಡಿರುವುದು ಸತ್ಯ ಸಂದ ಜಯವಾಗಿದೆ. ಇದಕ್ಕಾಗಿ ಸೃಷ್ಟಿಕರ್ತನನ್ನು ಸ್ತುತಿಸುವುದಾಗಿ ತಿಳಿಸಿದರು.

Join Whatsapp
Exit mobile version