ಮಂಗಳೂರು : ಎಂಜಿನ್ ಸಮಸ್ಯೆಯಿಂದ ಸಮುದ್ರದಲ್ಲಿ ಸಿಲುಕಿದ ಬೋಟ್ | ಮೂವರು ಮೀನುಗಾರರ ರಕ್ಷಣೆ

Prasthutha|

ಮಂಗಳೂರು :  ಸಮುದ್ರದಲ್ಲಿ ಬೋಟ್ ವೊಂದು ಕೆಟ್ಟು ನಿಂತಿದ್ದ ಪರಿಣಾಮ ಅದರಲ್ಲಿದ್ದ ಮೂವರು ಮೀನುಗಾರರನ್ನು ಕರಾವಳಿ ಕಾವಲು ಪಡೆ ರಕ್ಷಣೆ ಮಾಡಿದೆ.

- Advertisement -

ಕಣ್ಣೂರಿನಿಂದ 10 ನಾಟಿಕಲ್‌ ಮೈಲಿ ದೂರದಲ್ಲಿ ಎಂಜಿನ್‌ ಸಮಸ್ಯೆಯಿಂದ ಕೆಟ್ಟು ನಿಂತಿದ್ದ ಬೋಟ್ ನ ಬಗ್ಗೆ ಮಾಹಿತಿ ಪಡೆದ ಕರಾವಳಿ ಕಾವಲು ಪಡೆ ಸಿಬ್ಬಂದಿಗಳು ವಿಕ್ರಮ್‌ ಹಡಗಿನಲ್ಲಿ ಕಾರ್ಯಾಚರಣೆ ನಡೆಸಿ, ಮೂವರನ್ನು ರಕ್ಷಿಸಿದ್ದಾರೆ. ರಕ್ಷಿಸಿದ ಮೀನುಗಾರರಿಗೆ ಆಹಾರ, ವೈದ್ಯಕೀಯ ನೆರವು ನೀಡಲಾಗಿದೆ.

ತೌಕ್ತೆ ಚಂಡಮಾರುತದಿಂದ ಕರಾವಳಿಯಲ್ಲಿ ಶುಕ್ರವಾರ ರಾತ್ರಿಯಿಂದಲೇ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಜನತೆ ಕಂಗಾಲಾಗಿದ್ದಾರೆ.

- Advertisement -

ವೀಕೆಂಡ್ ಕರ್ಪ್ಯೂ ತೆರವುಗೊಳಿಸಿದ್ದರಿಂದ ಕಾರ್ಮಿಕರು ನಿರ್ಮಾಣ ಕಾಮಗಾರಿ ಸೇರಿದಂತೆ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸಿದ್ಧರಾಗಿದ್ದರೂ ಮಳೆಯಿಂದಾಗಿ ಹೊರಗೆ ಹೋಗದಂತಾಗಿದೆ. 

Join Whatsapp