Home ಟಾಪ್ ಸುದ್ದಿಗಳು ಪ್ರವಾದಿ ನಿಂದನೆ: ಟೈಮ್ಸ್ ನೌ ನಿರೂಪಕಿ ವಿರುದ್ಧದ ಎಫ್ ಐಆರ್ ಗಳನ್ನು ದೆಹಲಿಗೆ ವರ್ಗಾಯಿಸಿದ ಸುಪ್ರೀಂ...

ಪ್ರವಾದಿ ನಿಂದನೆ: ಟೈಮ್ಸ್ ನೌ ನಿರೂಪಕಿ ವಿರುದ್ಧದ ಎಫ್ ಐಆರ್ ಗಳನ್ನು ದೆಹಲಿಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಪ್ರವಾದಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ಟೈಮ್ಸ್ ನೌ ನಿರೂಪಕಿ ನವಿಕಾ ಕುಮಾರ್ ಅವರ ವಿರುದ್ಧ ದಾಖಲಾಗಿರುವ ಮತ್ತು ಭವಿಷ್ಯದಲ್ಲಿ ದಾಖಲಾಗುವ ಎಲ್ಲಾ ಎಫ್ ಐಆರ್ ಗಳನ್ನು ದೆಹಲಿ ಪೊಲೀಸರಿಗೆ ವರ್ಗಾಯಿಸುವಂತೆ ಸುಪ್ರೀಂಕೋರ್ಟ್ ಶುಕ್ರವಾರ ಆದೇಶ ನೀಡಿದೆ.

ಚಾನೆಲ್ ಚರ್ಚೆಯಲ್ಲಿ ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಬಿಜೆಪಿ ಮುಖಂಡೆ ನೂಪುರ್ ಶರ್ಮಾ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಟೈಮ್ಸ್ ನೌ ನಿರೂಪಕಿ ನಾವಿಕಾ ಕುಮಾರ್ ಅವರ ವಿರುದ್ಧ ದಾಖಲಾಗಿರುವ ಮತ್ತು ಭವಿಷ್ಯದಲ್ಲಿ ದಾಖಲಾಗುವ ಎಲ್ಲಾ ಎಫ್ ಐಆರ್ ಗಳನ್ನು ದೆಹಲಿ ಪೂಲ್ಸ್ ನ ಐಎಫ್ ಎಸ್ ಒ ಘಟಕಕ್ಕೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.

ದೆಹಲಿ ಪೊಲೀಸ್ ಐಎಫ್ ಎಸ್ ಒ ಘಟಕವು ದಾಖಲಿಸಿರುವ ಎಫ್ ಐಆರ್ ಅನ್ನು ಪ್ರಮುಖ ಪ್ರಕರಣವಾಗಿ ತೆಗೆದುಕೊಳ್ಳಲಾಗುತ್ತದೆ

ಪ್ರಸ್ತುತ ಎಫ್ ಐಆರ್ ಗಳು ಅಥವಾ ಭವಿಷ್ಯದಲ್ಲಿ ದಾಖಲಾಗಬಹುದಾದ ಎ ಎಫ್ ಐಆರ್ ಗಳಿಗೆ ಸಂಬಂಧಿಸಿದಂತೆ ನವಿಕಾ ಕುಮಾರ್ ವಿರುದ್ಧ ಯಾವುದೇ ಬಲವಂತದ ಕ್ರಮವನ್ನು ತೆಗೆದುಕೊಳ್ಳಲಾಗುವುದಿಲ್ಲ. ಎಫ್ ಐಆರ್ ಗಳನ್ನು ರದ್ದುಗೊಳಿಸುವ ಪರಿಹಾರವನ್ನು ಕೋರಿ ದೆಹಲಿ ಹೈಕೋರ್ಟ್ ಗೆ ಹೋಗಲು ಆಕೆಗೆ ಸ್ವಾತಂತ್ರ್ಯವಿದೆ. ಈ ವಿಷಯದ ಅರ್ಹತೆಗಳ ಬಗ್ಗೆ ತಾನು ಏನನ್ನೂ ವ್ಯಕ್ತಪಡಿಸಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಕೃಷ್ಣ ಮುರಾರಿ ಅವರನ್ನು ಒಳಗೊಂಡ ಪೀಠವು ಸೆಪ್ಟೆಂಬರ್ 16ರಂದು ಈ ವಿಷಯದಲ್ಲಿ ಆದೇಶಗಳನ್ನು ಕಾಯ್ದಿರಿಸಿತ್ತು.

Join Whatsapp
Exit mobile version