Home ಟಾಪ್ ಸುದ್ದಿಗಳು ಕೃಷಿ ಕಾನೂನುಗಳ ಬಗ್ಗೆ ಮಾತನಾಡದಿದ್ದರೆ ರಾಷ್ಟ್ರಪತಿ ಪದವಿಯ ಭರವಸೆ; ತಿರಸ್ಕರಿಸಿದ ಮೇಘಾಲಯ ರಾಜ್ಯಪಾಲ

ಕೃಷಿ ಕಾನೂನುಗಳ ಬಗ್ಗೆ ಮಾತನಾಡದಿದ್ದರೆ ರಾಷ್ಟ್ರಪತಿ ಪದವಿಯ ಭರವಸೆ; ತಿರಸ್ಕರಿಸಿದ ಮೇಘಾಲಯ ರಾಜ್ಯಪಾಲ

ಹೊಸದಿಲ್ಲಿ: ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಿದ ಕೇಂದ್ರ ಸರ್ಕಾರ, ಈ ವಿವಾದಾತ್ಮಕ ಕಾನೂನುಗಳ ಬಗ್ಗೆ ಮಾತನಾಡದಿದ್ದರೆ ರಾಷ್ಟ್ರಪತಿ ಪದವಿ ನೀಡುವುದಾಗಿ ನನಗೆ ಆಮಿಷ ಒಡ್ಡಿತ್ತು ಎಂದು ಎಂದು ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ.

 ಬಿಜೆಪಿಯೊಂದಿಗೆ ಆಪ್ತವಾಗಿ ಗುರುತಿಸಿಕೊಂಡಿದ್ದ ಸತ್ಯಪಾಲ್,ಇತ್ತೀಚೆಗೆ ಮೂರು ಕೃಷಿ ಕಾನೂನುಗಳ ವಿವಾದದ ಬಳಿಕ ಕೇಂದ್ರ ಸರ್ಕಾರವನ್ನು ತೀಕ್ಷ್ಣವಾಗಿ ಟೀಕಿಸುತ್ತಿದ್ದಾರೆ.

ಹರ್ಯಾಣದ ಜಿಂಡ್‌ ಜಿಲ್ಲೆಯ ಖಂಡೇಲ ಗ್ರಾಮದ ಖಾಪ್‌ನಲ್ಲಿ ಮಾತನಾಡಿದ ಸತ್ಯಪಾಲ್‌, ಮುಂದಿನ ಆರೇಳು ತಿಂಗಳಲ್ಲಿ ರಾಜ್ಯಪಾಲರಾಗಿ ನನ್ನ ಅಧಿಕಾರಾವಧಿ ಮುಗಿಯುತ್ತದೆ.ರೈತರು ಒಗ್ಗಟ್ಟಾಗಿ 2024 ರಲ್ಲಿ ತಮ್ಮದೇ ಆದ ಸರ್ಕಾರವನ್ನು ರಚಿಸಬೇಕಿದೆ. ಪ್ರತಿಭಟನಾ ಅವಧಿಯಲ್ಲಿನಾವು 700 ಕ್ಕೂ ಅಧಿಕ ರೈತರನ್ನು ಕಳೆದುಕೊಂಡಿದ್ದೇವೆ. ಒಂದು ನಾಯಿ ಮರಿ ಸತ್ತಾಗ ಪತ್ರ ಬರೆಯುವ ಪ್ರಧಾನಿಗೆ ರೈತರ ಸಾವಿಗೆ ಸಂತಾಪ ಸೂಚಿಸಲು ಆಗಲಿಲ್ಲʼ ಎಂದು ಕಿಡಿಕಾರಿದ್ದಾರೆ.

Join Whatsapp
Exit mobile version