Home ಕರಾವಳಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಘನ ವಾಹನಗಳ ಸಂಚಾರ ನಿಷೇಧ

ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಘನ ವಾಹನಗಳ ಸಂಚಾರ ನಿಷೇಧ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ-73 (ಹಳೆ ರಾ.ಹೆ.234) ಮಂಗಳೂರು-ತುಮಕೂರು ರಸ್ತೆಯ 75 ಕಿಮೀ. (ಚಾರ್ಮಾಡಿ ಗ್ರಾಮ) ದಿಂದ 86.20 ಕಿ.ಮೀ (ದಕ್ಷಿಣ ಕನ್ನಡ ಜಿಲ್ಲಾ ಗಡಿ)ವರೆಗಿನ ಚಾರ್ಮಾಟಿ ಘಾಟ್ ರಸ್ತೆಯಲ್ಲಿ 2021ರ ಡಿ.18 ರಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ದಿನದ 24 ಗಂಟೆಯೂ ಲಘು ಹಾಗೂ ಘನ ವಾಹನಗಳ ಸಂಚಾರಕ್ಕೆ ಅನುಮತಿ ನೀಡಿ, ಅದೇ ರೀತಿ ಭಾರಿವಾಹನಗಳ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಆದೇಶ ಹೊರಡಿಸಿದ್ದಾರೆ.
ಲಘು, ಘನ ವಾಹನಗಳು(ಗುಂಪು-ಎ):
ಸಾರ್ವಜನಿಕರು ಸಂಚರಿಸುವ ಕೆ.ಎಸ್.ಆರ್.ಟಿ.ಸಿ ಕೆಂಪು ಬಸ್ಸು, ಆರು ಚಕ್ರದ ಲಾರಿ, ನಾಲ್ಕು ಚಕ್ರದ ವಾಹನಗಳು, ಟೆಂಪೋ ಟ್ರಾವೆಲರ್ಸ್, ಆ್ಯಂಬುಲೆನ್ಸ್, ಕಾರು, ಜೀಪು, ವ್ಯಾನ್, ಎಲ್.ಸಿ.ವಿ(ಮಿನಿ ವ್ಯಾನ್) ಹಾಗೂ ದ್ವಿಚಕ್ರ ವಾಹನಗಳು ದಿನದ 24 ಗಂಟೆಯೂ ಸಂಚರಿಸಬಹುದಾಗಿದೆ.
ಘನ ವಾಹನಗಳು(ಗುಂಪು-ಬಿ):
ಬುಲೆಟ್ ಟ್ಯಾಂಕರ್ರ್ಸ್, ಪಿಪ್ ಕಾರ್ಗೋ ಕಂಟೈನರ್ಸ್ ಹಾಗೂ ಲಾಂಗ್ ಚಾಸೀಸ್ ವಾಹನಗಳೂ, ಹೆವಿ ಕಮರ್ಷಿಯಲ್ ವೆಹಿಕಲ್ಸ್, ಮಲ್ಟಿ ಎಕ್ಸೆಲ್ ಟ್ರಕ್, ಟ್ರಕ್ ಟ್ರೈಲರ್, ಕೆ.ಎಸ್.ಆರ್.ಟಿ.ಸಿ. ರಾಜಹಂಸ ಮತ್ತು ಎಲ್ಲಾ ಬಗ್ಗೆಯ ಅಧಿಕ ಭಾರದ ಸರಕು ಸಾಗಣೆ ವಾಹನಗಳ ಸಂಚಾರವನ್ನು ದಿನದ 24 ಗಂಟೆಯೂ ನಿರ್ಬಂಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Join Whatsapp
Exit mobile version