Home ಟಾಪ್ ಸುದ್ದಿಗಳು ನಮ್ಮ ಧರ್ಮ, ಸಂಸ್ಕೃತಿ, ಪರಂಪರೆ ಉಳಿಸಿಕೊಳ್ಳಲು ಮತಾಂತರ ನಿಷೇಧ ಕಾಯ್ದೆ ಜಾರಿ: ಆರಗ ಜ್ಞಾನೇಂದ್ರ

ನಮ್ಮ ಧರ್ಮ, ಸಂಸ್ಕೃತಿ, ಪರಂಪರೆ ಉಳಿಸಿಕೊಳ್ಳಲು ಮತಾಂತರ ನಿಷೇಧ ಕಾಯ್ದೆ ಜಾರಿ: ಆರಗ ಜ್ಞಾನೇಂದ್ರ

ಬೆಳಗಾವಿ: ಗೃಹ ಸಚಿವ ಆರಗ ಜ್ಞಾನೇಂದ್ರ ಬುಧವಾರ ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ಅಗ್ನಿಶಾಮಕ ದಳದ ನೂತನ ಕಟ್ಟಡದ ಉದ್ಘಾಟನೆ ನಡೆಸಿ ಮಾತನಾಡಿದರು.


ಅಗ್ನಿ ಅವಘಡ ಹಾಗೂ ಪ್ರಕೃತಿ ವಿಕೋಪಗಳ ಸಂಧರ್ಬದಲ್ಲಿ, ಸಂತ್ರಸ್ತರು ಹಾಗೂ ಅಮೂಲ್ಯ ಆಸ್ತಪಾಸ್ತಿಗಳನ್ನು ಸಂರಕ್ಷಣೆಗೆ ಧಾವಿಸುವ ಸಿಬ್ಬಂದಿಗಳಿಗೆ ಅತ್ಯುತ್ತಮ ತರಬೇತಿ ನೀಡಲಾಗಿದೆ. ನಮ್ಮ ಸಿಬ್ಬಂದಿಗಳು, ಆಯಾ ಅಗ್ನಿಶಾಮಕ ಠಾಣೆ ವ್ಯಾಪ್ತಿಯಲ್ಲಿ, ಶಾಲಾ ಕಾಲೇಜುಗಳ ವಿಧ್ಯಾರ್ಥಿಗಳಿಗೆ, ಪ್ರಕೃತಿ ವಿಕೋಪದ ಹಾಗೂ ಇನ್ನಿತರ ತುರ್ತು ಸನ್ನಿವೇಶಗಳನ್ನು ಎದುರಿಸಲು ತರಬೇತಿ ನೀಡುವಂಥ ಕಾರ್ಯವೂ ನಡೆಸಲಿದ್ದಾರೆ, ಎಂದು ಸಚಿವರು ತಿಳಿಸಿದರು.


ನಮ್ಮ ಸರಕಾರ ಜನತೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬದ್ಧವಾಗಿದ್ದು, ಕಳೆದ ಮೂರೂವರೆ ವರ್ಷಗಳಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ವ್ಯಯಿಸದೆ ಎಂದರು.


ಪ್ರಸ್ತುತ ವಿಧಾನಸಭೆಯಲ್ಲಿ ಮಂಡಿಸಿರುವ ಮತಾಂತರ ವಿರೋಧಿ ಕಾಯಿದೆಯ ಮಹತ್ವವನ್ನು ವಿವರಿಸಿ, ನಮ್ಮ ಧರ್ಮ, ಸಂಸ್ಕೃತಿ, ಪರಂಪರೆ ಗಳನ್ನೂ ಉಳಿಸಿಕೊಂಡು ಹೋಗಲು, ಇಂತಹ ಮಸೂದೆಯ ಅಗತ್ಯವಿದೆ. ನಮ್ಮ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವೂ ಅಗತ್ಯ ಎಂದೂ ಹೇಳಿದರು.

ಶಾಸಕರಾದ ದುರ್ಯೋಧನ ಐಹೊಳೆ ಮತ್ತು ಕುಡಚಿ ಶಾಸಕ P ರಾಜೀವ್, ಹಾಗೂ ರಾಜ್ಯ ಅಗ್ನಿ ಶಾಮಕ ದಳ ಮುಖ್ಯಸ್ಥ ಅಮರ್ ಕುಮಾರ್ ಪಾಂಡೆ ಮತ್ತಿತರರು ಉಪಸ್ಥಿತರಿದ್ದರು.

Join Whatsapp
Exit mobile version