ಮಣಿಪಾಲ: ಮಣಿಪಾಲದ ಆರ್ಕಿಟೆಕ್ ಕಾಲೇಜಿನ ಪ್ರೊಫೆಸರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ದಶರಥ ನಗರದ ಖಾಸಗಿ ವಸತಿಗೃಹದ 4ನೇ ಮಹಡಿಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಪ್ರೊಫೆಸರ್ ಉತ್ತರಪ್ರದೇಶ ಮೂಲದ ಅಹಮದ್ ಮಿರ್ಝಾ (38) ಸಾವನ್ನಪ್ಪಿದವರು. ಕಳೆದ ನಾಲ್ಕು ದಿನ ಹಿಂದೆ ಆತ್ಮಹತ್ಯೆ ಮಾಡಿಕೊಂಡಿಬಹುದೆಂದು ಶಂಕಿಸಲಾಗಿದೆ.
ಮಣಿಪಾಲ ಎಸ್ ಐ ನವೀನ್ ನಾಯ್ಕ್, ಪೊಲೀಸ್ ಹೆಡ್ ಕಾನ್ಸ್ಟೇಬಲ್ ಸುಕುಮಾರ್, ಕಾನ್ಸ್ ಟೆಬಲ್ ಉಮೇಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕಾನೂನು ಪ್ರಕ್ರಿಯೆ ನಡೆಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಕೊಳೆತ ಕಳೇಬರವನ್ನು ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಇಲಾಖೆಗೆ ನೆರವಾದರು.