Home ಕರಾವಳಿ ಉಡುಪಿ | ತರಗತಿಯೊಳಗೆ ಮುಸ್ಲಿಮ್ ವಿದ್ಯಾರ್ಥಿಯನ್ನು ಭಯೋತ್ಪಾದಕ ಎಂದ ಪ್ರಾಧ್ಯಾಪಕ

ಉಡುಪಿ | ತರಗತಿಯೊಳಗೆ ಮುಸ್ಲಿಮ್ ವಿದ್ಯಾರ್ಥಿಯನ್ನು ಭಯೋತ್ಪಾದಕ ಎಂದ ಪ್ರಾಧ್ಯಾಪಕ

ಉಡುಪಿ: ತರಗತಿಯೊಳಗೆ ತನ್ನನ್ನು ಭಯೋತ್ಪಾದಕ ಎಂದು ನಿಂದಿಸಿದ ಪ್ರಾಧ್ಯಾಪಕನಿಗೆ ವಿದ್ಯಾರ್ಥಿಯೋರ್ವ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಘಟನೆ ಉಡುಪಿಯ ಮಾಹೆ ವಿಶ್ವವಿದ್ಯಾಲಯದ ಎಂಐಟಿ ಕಾಲೇಜಿನಲ್ಲಿ ನಡೆದಿದೆ.


ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ವೈರಲ್ ವೀಡಿಯೋದಲ್ಲಿ ವಿದ್ಯಾರ್ಥಿ ಹಂಝಾ, ನೀವು ನನ್ನನ್ನು ಹಾಗೆ ಹೇಗೆ ಕರೆಯುತ್ತೀರಿ ಎಂದು ಪ್ರಾಧ್ಯಾಪಕನಿಗೆ ಪ್ರಶ್ನೆಯನ್ನು ಕೇಳಿದ್ದಾನೆ. ಇದಕ್ಕೆ ಪ್ರಾಧ್ಯಾಪಕ ನಾನು ಹಾಸ್ಯದ ಧಾಟಿಯಲ್ಲಿ ಇದನ್ನು ಹೇಳಿದ್ದೇನೆ ಎಂದು ಹೇಳುತ್ತಾರೆ. ಈ ಘಟನೆ ಹಾಸ್ಯ ಅಲ್ಲ ಮತ್ತು ಮುಸ್ಲಿಮನಾಗಿ ಈ ರೀತಿಯ ವರ್ತನೆಯನ್ನು ಪ್ರತಿನಿತ್ಯ ಅನುಭವಿಸುತ್ತಿದ್ದೇವೆ ಎಂದು ವಿದ್ಯಾರ್ಥಿ ತಿಳಿಸಿದ್ದಾನೆ.


ಆಕ್ಷೇಪದ ಬಳಿಕ ಪ್ರಾಧ್ಯಾಪಕ ಕ್ಷಮೆ ಕೇಳಿದ್ದಾರೆ. ವಿದ್ಯಾರ್ಥಿ ಆಕ್ಷೇಪ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಾಹೆ ಕಾಲೇಜು ಆಡಳಿತ ಮಂಡಳಿ ಉಪನ್ಯಾಸಕನನ್ನು ಅಮಾನತುಗೊಳಿಸಿ ಆಂತರಿಕ ತನಿಖೆಗೆ ವಹಿಸಿದೆ.

Join Whatsapp
Exit mobile version