Home ರಾಜ್ಯ ಮಾಜಿ ಸಚಿವ ಪ್ರೊ.ಮಮ್ತಾಝ್ ಅಲಿ ಖಾನ್ ನಿಧನ

ಮಾಜಿ ಸಚಿವ ಪ್ರೊ.ಮಮ್ತಾಝ್ ಅಲಿ ಖಾನ್ ನಿಧನ

ಬೆಂಗಳೂರು: ಮಾಜಿ ಸಚಿವ ಪ್ರೊ.ಮಮ್ತಾಝ್ ಅಲಿ ಖಾನ್ ಬೆಂಗಳೂರಿನ ತಮ್ಮ ನಿವಾಸದಲ್ಲಿ ವಯೋಸಹಜ ಸಮಸ್ಯೆಯಿಂದ ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.
2008ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಸಂಪುಟದಲ್ಲಿ ಅಲ್ಪಸಂಖ್ಯಾತ ಕಲ್ಯಾಣ, ಹಜ್ ಮತ್ತು ವಕ್ಫ್ ಖಾತೆ ಸಚಿವರಾಗಿದ್ದ ಖಾನ್, ಬಿಜೆಪಿಯಿಂದ ವಿಧಾನ ಪರಿಷತ್ ಗೆ ನಾಮನಿರ್ದೇಶನಗೊಂಡಿದ್ದರು. ಬಳಿಕ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು.


ಮಮ್ತಾಝ್ ಅಲಿ ಖಾನ್ ಅವರು ಎಂ.ಎ, ಬಿ. ಎಲ್. ಪಿ. ಹೆಚ್.ಡಿ. ಪದವಿ ಪಡೆದಿದ್ದರು. ಸಾಹಿತ್ಯ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ದಸರಾ ಪ್ರಶಸ್ತಿ-ಸಮಾಜ ಸೇವೆ-ಕರ್ನಾಟಕ ಸರ್ಕಾರ (1992), ಭಾರತ ರತ್ನ ಡಾ. ಬಿ. ಆರ್‍. ಅಂಬೇಡ್ಕರ್ ಪ್ರಶಸ್ತಿ (2002), ಶ್ರೀ ಜಿ. ನಾರಾಯಣ ಕುಮಾರ್‌ ಸಂಸ್ಥೆಯಿಂದ ಸಮಾಜ ಸೇವೆಗಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ (1993) ಸೇರಿದಂತೆ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.


ಓರ್ವ ಪುತ್ರಿ ಹಾಗೂ ಪುತ್ರ ಮತ್ತು ಪತ್ನಿಯನ್ನು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಬೆಂಗಳೂರಿನ ಕುದ್ದೂಸ್ ಸಾಹೇಬ್ ಖಬರಸ್ಥಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.

Join Whatsapp
Exit mobile version