Home ಟಾಪ್ ಸುದ್ದಿಗಳು ಸಂಸದ ಪ್ರತಾಪ್ ಯಾವಾಗ ಸಿಂಹವಾಗಿದ್ದರು: ಟಿಪ್ಪು ವಿರೋಧಿ ಹೇಳಿಕೆಗೆ ಛಾಟಿ ಬೀಸಿದ ಪ್ರೊ.ಬಿ.ಪಿ ಮಹೇಶ್ ಚಂದ್ರಗುರು

ಸಂಸದ ಪ್ರತಾಪ್ ಯಾವಾಗ ಸಿಂಹವಾಗಿದ್ದರು: ಟಿಪ್ಪು ವಿರೋಧಿ ಹೇಳಿಕೆಗೆ ಛಾಟಿ ಬೀಸಿದ ಪ್ರೊ.ಬಿ.ಪಿ ಮಹೇಶ್ ಚಂದ್ರಗುರು

ಮೈಸೂರು: ಟಿಪ್ಪು ಯಾವಾಗ ಹುಲಿಯನ್ನು ಕೊಂದಿದ್ದರು ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪ್ರಗತಿಪರ ಚಿಂತಕ ಪ್ರೊ. ಬಿ.ಪಿ. ಮಹೇಶ್ ಚಂದ್ರಗುರು, ಪ್ರತಾಪ್ ಯಾವಾಗ ಸಿಂಹವಾಗಿದ್ದರು ಎಂದು ತಿರುಗೇಟು ನೀಡಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದ ಶ್ರೇಷ್ಠ ಚಿಂತಕ, ಆಡಳಿತಗಾರ ಮತ್ತು ಮಹಾನ್ ರಾಷ್ಟ್ರೀಯವಾದಿ ಟಿಪ್ಪು ಸುಲ್ತಾನ್ ಕುರಿತು ಮೈಸೂರು ಸಂಸದ ಪ್ರತಾಪ್ ಹೇಳಿಕೆಯು ಇತಿಹಾಸಕ್ಕೆ ಮಾಡಿದ ಅವಮಾನವಾಗಿದೆ.

ಟಿಪ್ಪು ಯಾವಾಗ ಹುಲಿಯನ್ನು ಕೊಂದಿದ್ದ ಎಂದು ಹೇಳಿರುವ ಸಂಸದ ಪ್ರತಾಪ್ ಯಾವಾಗ ಸಿಂಹವಾಗಿದ್ದರು ಎಂದು ಉತ್ತರಿಸಲಿ ಎಂದು ಆಗ್ರಹಿಸಿದ್ದಾರೆ.

ಈ ಮಧ್ಯೆ ಸ್ವಾತಂತ್ರ್ಯ ಹೋರಾಟಗಾರನಾದ ಟಿಪ್ಪುವನ್ನು ಹಿಂದುತ್ವವಾದಿಗಳು ಮತಾಂಧ ಎಂಬ ಹಣೆಪಟ್ಟಿ ಕಟ್ಟಿ ಪಠ್ಯ ಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಅವರ ಮೈಸೂರು ಹುಲಿ ಎಂಬ ಬಿರುದನ್ನು ಕೈಬಿಟ್ಟಿರುವುದು ಸೂಕ್ತವಲ್ಲ ಎಂದು ಅವರು ಕಿಡಿಕಾರಿದ್ದಾರೆ.

Join Whatsapp
Exit mobile version