Home ಟಾಪ್ ಸುದ್ದಿಗಳು ಪ್ಯಾಲೆಸ್ತೀನ್ ಪರ ಹೇಳಿಕೆ: ಸಿನೆಮಾದಿಂದ ಹಾಲಿವುಡ್ ನಟಿ ಔಟ್

ಪ್ಯಾಲೆಸ್ತೀನ್ ಪರ ಹೇಳಿಕೆ: ಸಿನೆಮಾದಿಂದ ಹಾಲಿವುಡ್ ನಟಿ ಔಟ್

ಲಾಸ್‌ ಏಂಜಲಿಸ್: ಪ್ಯಾಲೆಸ್ತೀನ್‌ ಪರವಾಗಿ ನೀಡಿದ ಹೇಳಿಕೆಗಳಿಂದ ಸುದ್ದಿಯಾಗಿದ್ದ ಹಾಲಿವುಡ್‌ ನಟಿ ಅದಕ್ಕಾಗಿ ಬೆಲೆ ತೆರಬೇಕಾಗಿ ಬಂದಿದೆ. ಪ್ಯಾಲೆಸ್ತೀನ್ ನಾಗರಿಕರ ಮಾರಣಹೋಮಕ್ಕೆ ಮಿಡಿದ ನಟಿ ಸೂಸನ್ ಸಾರಂಡೊನ್‌ ಅವರನ್ನು ಥ್ರಿಲ್ಲರ್‌ ಸಿನಿಮಾ “ಸ್ಲಿಪ್ಪಿಂಗ್‌ ಅವೇ”ದಿಂದ ಕೈಬಿಡಲಾಗಿದೆ.

ಸೂಸನ್‌ ಅವರ ಹೇಳಿಕೆಗಳು ನಮ್ಮ ಸಂಸ್ಥೆಯ ಅಭಿಪ್ರಾಯಗಳಿಗೆ ಸರಿಹೊಂದುವುದಿಲ್ಲ.ನಾವು ನಮ್ಮ ಕಿರುಚಿತ್ರಕ್ಕೆ ಆಕೆಯನ್ನು ಆಯ್ಕೆಮಾಡಿದ್ದೆವು. ಆದರೆ ಆಕೆಯ ಇತ್ತೀಚಿಗಿನ ಹೇಳಿಕೆಗಳಿಂದಾಗಿ ನಾವು ಬೇರೆಯವರನ್ನು ಆಯ್ಕೆ ಮಾಡಿದ್ದೇವೆ ಎಂದು “ಸ್ಲಿಪ್ಪಿಂಗ್‌ ಅವೇ” ನಿರ್ಮಾಣ ಸಂಸ್ಥೆಯಾದ ಪಿಟಿಒ ಫಿಲ್ಮ್ಸ್‌ ಹೇಳಿದೆ.

Join Whatsapp
Exit mobile version