Home ಕರಾವಳಿ ‘ಪಾಕಿಸ್ತಾನ್ ಝಿಂದಾಬಾದ್’ ಘೋಷಣೆ ಷಡ್ಯಂತ್ರಕ್ಕೆ ದ.ಕ.ಜಿಲ್ಲಾ ಪೊಲೀಸರ ಸಾಥ್ : ಪಾಪ್ಯುಲರ್ ಫ್ರಂಟ್ ತೀವ್ರ ಆಕ್ರೋಶ

‘ಪಾಕಿಸ್ತಾನ್ ಝಿಂದಾಬಾದ್’ ಘೋಷಣೆ ಷಡ್ಯಂತ್ರಕ್ಕೆ ದ.ಕ.ಜಿಲ್ಲಾ ಪೊಲೀಸರ ಸಾಥ್ : ಪಾಪ್ಯುಲರ್ ಫ್ರಂಟ್ ತೀವ್ರ ಆಕ್ರೋಶ

ಮಂಗಳೂರು : ‘ಪಾಕಿಸ್ತಾನ್ ಝಿಂದಾಬಾದ್’ ಘೋಷಣೆ ಷಡ್ಯಂತ್ರಕ್ಕೆ ಪೂರಕವಾಗಿ ಮುಸ್ಲಿಮ್ ಯುವಕರನ್ನು ಗುರಿಪಡಿಸುತ್ತಿರುವ ದ.ಕ. ಜಿಲ್ಲಾ ಪೊಲೀಸರ ಕೋಮುವಾದಿ ನಡೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ದ.ಕ.ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೆಲುವಿನ ಸಂಭ್ರಮಾಚರಣೆಯ ವೇಳೆ ಮತ ಎಣಿಕೆ ಕೇಂದ್ರದ ಹೊರಗಡೆ ಎಸ್.ಡಿ.ಪಿ.ಐ. ಕಾರ್ಯಕರ್ತರು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ ಎಂದು ಸಂಘಪರಿವಾರವು ಪ್ರಚಾರಪಡಿಸಿದ ಕಟ್ಟುಕಥೆಯನ್ನು ಆಧರಿಸಿಕೊಂಡು ಕೆಲವೊಂದು ಮಾಧ್ಯಮಗಳು ವರದಿಯನ್ನು ಪ್ರಸಾರ ಮಾಡಿದ್ದವು. ಈ ಮಧ್ಯೆ ಟಿವಿ ಚಾನೆಲ್ ವೊಂದು ತಾನು ಪ್ರಸಾರ ಮಾಡಿದ ವರದಿಯನ್ನು ಯೂಟ್ಯೂಬ್ ನಿಂದ ಈಗಾಗಲೇ ಅಳಿಸಿ ಹಾಕಿರುವುದು ಗಮನಾರ್ಹವಾಗಿದೆ. ವಾಸ್ತವವೆಂದರೆ, ಮೂಲ ವಿಡಿಯೋದಲ್ಲಿ ಎಸ್.ಡಿ.ಪಿ.ಐ. ಕಾರ್ಯಕರ್ತರು ಪಾಕಿಸ್ತಾನ ಪರ ಘೋಷಣೆ ಕೂಗಿದ ವಿಚಾರ ಎಲ್ಲೂ ಕಂಡುಬರುವುದಿಲ್ಲ. ಆದ್ದರಿಂದ ದ್ವೇಷ ಹಾಗೂ ಅಶಾಂತಿ ಸೃಷ್ಟಿಸುವ ದುರುದ್ದೇಶದೊಂದಿಗೆ ಮೂಲ ವಿಡಿಯೋವನ್ನು ತಿರುಚಿರುವ ಸಾಧ್ಯತೆಗಳು ನಿಚ್ಚಳವಾಗಿದೆ. ಆದಾಗ್ಯೂ, ಬೆಳ್ತಂಗಡಿ ಪೊಲೀಸರು ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಮುನ್ನವೇ ಮೂವರು ಮುಸ್ಲಿಮ್ ಯುವಕರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ ಮತ್ತು ಹಲವರನ್ನು ವಿಚಾರಣೆ ನಡೆಸಿದ್ದಾರೆ. ಇದು ಪೊಲೀಸರ ಕೋಮುವಾದಿ ಮತ್ತು ಪೂರ್ವಾಗ್ರಹಪೀಡಿತ ಕ್ರಮ ಎಂಬುದು ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಮುಸ್ಲಿಮ್ ಸಮುದಾಯವನ್ನು ಅವಹೇಳನ ನಡೆಸಿದಾಗ ಸಾಕ್ಷ್ಯಾಧಾರಗಳ ಜೊತೆಗೆ ಬಹಳಷ್ಟು ದೂರುಗಳನ್ನು ನೀಡಲಾಗಿತ್ತು. ಆದರೆ ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಮುಂದಾಗದ ಬೆಳ್ತಂಗಡಿ ಪೊಲೀಸರು, ಇದೀಗ ಘಟನೆಯ ಕುರಿತು ಕೂಲಂಕುಷವಾಗಿ ಪರಿಶೀಲನೆ ನಡೆಸದೆ ಮುಸ್ಲಿಮ್ ಯುವಕರ ವಿರುದ್ಧ ತರಾತುರಿಯಲ್ಲಿ ಎಫ್.ಐ.ಆರ್. ದಾಖಲಿಸಿದ್ದಾರೆ. ಸಂಘಪರಿವಾರದ ಒತ್ತಡಕ್ಕೆ ಮಣಿದು  ಪೊಲೀಸ್ ಇಲಾಖೆ ನಡೆಸುತ್ತಿರುವ ಈ ತಾರತಮ್ಯ ನೀತಿಯು ಖಂಡನಾರ್ಹವಾದುದು ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ ಕಮಿಷನರ್ ಕೂಡ ಮುಸ್ಲಿಮ್ ಸಮುದಾಯವನ್ನು ನಿರ್ದಿಷ್ಟವಾಗಿ ಗುರಿಪಡಿಸಿಕೊಂಡು ಇದೇ ರೀತಿ ಏಕಪಕ್ಷೀಯ ಕಾರ್ಯಾಚರಣೆ ನಡೆಸಿ ಜಿಲ್ಲೆಗೆ ಕಳಂಕ ತಂದಿದ್ದು ಇತಿಹಾಸ. ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಕೂಡ ಇದೀಗ ಇದೇ ಹಾದಿಯನ್ನು ಅನುಕರಿಸುತ್ತಿರುವುದು ಆತಂಕಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ. ಸುಳ್ಳಾರೊಪ ಹೊರಿಸಿ ದಾಖಲಿಸಿದ

Join Whatsapp
Exit mobile version