ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮೇಲೆ ಖಲಿಸ್ತಾನಿ ಪರ ಪ್ರತಿಭಟನಕಾರರಿಂದ ದಾಳಿ

Prasthutha|

ನವದೆಹಲಿ: ಖಲಿಸ್ತಾನಿ ಪರ ಪ್ರತಿಭಟನಕಾರರ ಗುಂಪೊಂದು ಭಾನುವಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಭಾರತೀಯ ರಾಯಭಾರಿ ಕಚೇರಿ ಮೇಲೆ ದಾಳಿ ನಡೆಸಿ ಹಾನಿಗೊಳಿಸಿದೆ.

- Advertisement -


ಇದಕ್ಕೆ ಕಾರಣರಾದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಭಾರತೀಯ-ಅಮೆರಿಕನ್ನರು ಒತ್ತಾಯಿಸಿದ್ದಾರೆ.


ಖಲಿಸ್ತಾನ್ ಪರ ಘೋಷಣೆಗಳನ್ನು ಕೂಗಿದ ಪ್ರತಿಭಟನಕಾರರು ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳನ್ನು ತಾತ್ಕಾಲಿಕ ಮುರಿದು ಕಾನ್ಸುಲೇಟ್ ಆವರಣದಲ್ಲಿ ಎರಡು ಖಲಿಸ್ತಾನಿ ಧ್ವಜಗಳನ್ನು ಸ್ಥಾಪಿಸಿದ್ದಾರೆ. ಈ ಕುರಿತ ವೀಡಿಯೋ ವೈರಲ್ ಆಗಿದ್ದು, ಈ ಘಟನೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ.

- Advertisement -

Join Whatsapp