ಹರಿದ ಜೀನ್ಸ್ ಕುರಿತು ಉತ್ತರಾಖಂಡ ಮುಖ್ಯಮಂತ್ರಿ ಹೇಳಿಕೆ ವಿವಾದ : ಆರೆಸ್ಸೆಸ್ಸಿಗರ ಚಡ್ಡಿಯ ಫೋಟೋ ಹಾಕಿ ಕಾಲೆಳೆದ ಪ್ರಿಯಾಂಕಾ ಗಾಂಧಿ

Prasthutha|

ಹರಿದ ಜೀನ್ಸ್ ವಿವಾದಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟ್ರೋಲ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಮೊಣಕಾಲು ಕಾಣುವ ರೀತಿಯಲ್ಲಿ ಹರಿದ ಜೀನ್ಸ್ ಧರಿಸುವುದು ಭಾರತೀಯ ಸಂಸ್ಕೃತಿಗೆ ಅನುಗುಣವಾಗಿದ್ದಲ್ಲ ಎಂದು ಬಿಜೆಪಿ ನಾಯಕ ಮತ್ತು ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ​​ಸಿಂಗ್ ರಾವತ್ ಅವರ ಹೇಳಿಕೆಯ ನಂತರ ‘ರಿಪ್ಡ್ ಜೀನ್ಸ್'(ಹರಿದ ಜೀನ್ಸ್) ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೆಂಡಿಂಗ್ ಆಗಿತ್ತು. ನರೇಂದ್ರ ಮೋದಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಗಣ ವೇಷದಲ್ಲಿರುವ ಚಿತ್ರಗಳನ್ನು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿ ‘ದೇವರೇ, ಇವರೆಲ್ಲರ ಮೊಣಕಾಲುಗಳು ಕಾಣುತ್ತಿದೆಯಲ್ಲಾ’ ಎಂದು ಹೇಳಿದ್ದಾರೆ.

 ಮಹಿಳೆಯರು ಹರಿದ ಜೀನ್ಸ್ ಧರಿಸುವ ಮೂಲಕ ತಮ್ಮ ಮಕ್ಕಳಿಗೆ ಯಾವ ಮೌಲ್ಯವನ್ನು ನೀಡಲು ಉದ್ದೇಶಿಸಿದ್ದಾರೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ​​ಸಿಂಗ್ ಹೇಳಿದ್ದರು. ಈ ಮಹಿಳೆಯರು ಮೊಣಕಾಲು ಕಾಣುವ ರೀತಿ ಹರಿದ ಜೀನ್ಸ್ ಧರಿಸಿದಾಗ ತಮ್ಮನ್ನು ತಾವು ಮಹಾನ್ ವ್ಯಕ್ತಿಗಳೆಂದು ಭಾವಿಸುತ್ತಾರೆ. ಹರಿದ ಜೀನ್ಸ್ ಖರೀದಿಸಲಿಕ್ಕಾಗಿಯೇ ಮಹಿಳೆಯರು ಅಂಗಡಿಗೆ ಹೋಗುತ್ತಾರೆ. ಹರಿದ ಜೀನ್ಸ್ ಸಿಗದಿದ್ದರೆ ಮಹಿಳೆಯರು ಸಾಮಾನ್ಯ ಜೀನ್ಸ್ ಖರೀದಿಸಿ ಕತ್ತರಿಯಿಂದ  ಮೊಣಕಾಲು ತನಕ ಕತ್ತರಿಸಿ ನಂತರ ಬಳಸುತ್ತಾರೆ ಎಂದು ಅವರು ಗೇಲಿ ಮಾಡಿದ್ದರು.

- Advertisement -

 ಇದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಚರ್ಚೆಯಾಗಿತ್ತು. “ವೇರಿಂಗ್ ರಿಪ್ಡ್ ಜೀನ್ಸ್” ಎಂಬ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿತ್ತು. ಉಡುಗೆಗಳು ತಮ್ಮ ಹಕ್ಕು ಎಂದು ಕೆಲವರು ಚಿತ್ರಗಳನ್ನು ಹಂಚಿಕೊಂಡಿದ್ದರು.

- Advertisement -