ಬೆಂಗಳೂರು : ಅನ್ನಭಾಗ್ಯ ಯೋಜನೆಯನ್ನು ಸರಿಯಾದ ಸಮಯಕ್ಕೆ ಜಾರಿಗೆ ತರದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದಿರುವ ಬಿಜೆಪಿ ನಾಯಕರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ನೀವು ನಿಮ್ಮ ಆಕ್ರೋಶವನ್ನು ಇಲ್ಲಲ್ಲ ಕೇಂದ್ರ ಸರ್ಕಾರದ ಮುಂದೆ ತೋರಿಸಿ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಹೊಸ ಸರ್ಕಾರಗಳು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ವಿವಿಧ ಯೋಜನೆಗಳನ್ನು ಜಾರಿಗೆ ತರೋಕೆ ಕೇಂದ್ರ ಸರ್ಕಾರದಿಂದ ಸಹಾಯ ಅನಿವಾರ್ಯವಾಗಿರುತ್ತೆ . ನಾವೇನು ಎಫ್ಸಿಐನಿಂದ ಬಿಟ್ಟಿಯಾಗಿ ಅಕ್ಕಿಯಾಗಿ ಕೇಳಿಲ್ಲ ಎಂದು ಗುಡುಗಿದ್ದಾರೆ.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪ್ರಧಾನಿ ನರೇಂದ್ರ ಮೋದಿಗೆ ನೀವು ಆಶೀರ್ವಾದ ಮಾಡದೇ ಇದ್ದಲ್ಲಿ ನಿಮಗೆ ಕೇಂದ್ರದಿಂದ ಯಾವುದೇ ನೆರವು ಸಿಗೋದಿಲ್ಲ ಎಂದಿದ್ದರು . ಇದೀಗ ಆ ಮಾತು ನಿಜವಾಗ್ತಿದೆ ಎಂದಿದ್ದಾರೆ.