ಲಸಿಕೆ ನೀಡುವ ವ್ಯವಸ್ಥೆಯನ್ನೇ ಮಾಡದ ಸರ್ಕಾರ ಟೀಕಾ ಉತ್ಸವ ಮಾಡಿತು : ಪ್ರಿಯಾಂಕಾ ಗಾಂಧಿ

Prasthutha|

ಹೊಸದಿಲ್ಲಿ : ಕೋವಿಡ್ ಸೋಂಕು ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿರುವ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಬಿಜೆಪಿ ನೇತೃತ್ವದ ಸರ್ಕಾರ ಏಪ್ರಿಲ್‌ನಲ್ಲಿ ‘ಟಿಕಾ ಉತ್ಸವ’ ಆಚರಿಸಿತು. ಆದರೆ ಕೋವಿಡ್ -19 ವಿರುದ್ಧ ಲಸಿಕೆಗಳನ್ನು ನೀಡಲು ವ್ಯವಸ್ಥೆ ಮಾಡಿಲ್ಲ, ಇದು ವ್ಯಾಕ್ಸಿನೇಷನ್ ಇಳಿಕೆಗೆ ಕಾರಣವಾಯಿತು ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಿಯಾಂಕ, ನಾಗರಿಕರಿಗೆ ಲಸಿಕೆ ನೀಡುವ ವಿಷಯದಲ್ಲಿ ಅಮೆರಿಕ, ಯುಕೆ, ಟರ್ಕಿ ಮತ್ತು ಫ್ರಾನ್ಸ್‌ ಗಿಂತ ಭಾರತ ಹಿಂದೆ ಇದೆ ಎಂದು ತೋರಿಸುವ ಗ್ರಾಫ್ ಅನ್ನು ಅವರು ಹಂಚಿಕೊಂಡಿದ್ದಾರೆ.’ಮೋದಿಜಿ ಲಸಿಕೆ ಕಾರ್ಖಾನೆಗಳಿಗೆ ಹೋದರು, ಛಾಯಾಚಿತ್ರಗಳನ್ನು ಕ್ಲಿಕ್ಕಿಸಿದರು, ಆದರೆ ಸರ್ಕಾರವು ಲಸಿಕೆ ಪ್ರಮಾಣಕ್ಕಾಗಿ ಮೊದಲ ಆದೇಶವನ್ನು ಜನವರಿ 2021 ರಲ್ಲಿ ಮಾತ್ರ ಏಕೆ ನೀಡಿತು?’ ಎಂದು ಅವರು ಪ್ರಶ್ನಿಸಿದ್ದಾರೆ.

- Advertisement -

ವ್ಯಾಕ್ಸಿನೇಷನ್ ಡ್ರೈವ್ ಪ್ರತಿ ಮನೆಯನ್ನೂ ತಲುಪುತ್ತದೆ ಎಂದು ಖಚಿತಪಡಿಸಿಕೊಳ್ಳದೆ ಕರೋನವೈರಸ್ ವಿರುದ್ಧ ಹೋರಾಡಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು.

- Advertisement -