July 25, 2021

ರೆಸ್ಲಿಂಗ್‌ ನಲ್ಲಿ ಬಂಗಾರ ಗೆದ್ದ ಪ್ರಿಯಾ ಮಲಿಕ್

ಬುಡಾಪೆಸ್ಟ್‌, ಜು.25: ಒಲಿಂಲಿಕ್ಸ್‌ನಲ್ಲಿ ಮೀರಾಭಾಯಿ ಚಾನು ಬೆಳ್ಳಿ ಪದಕ ಗೆದ್ದ ಬೆನ್ನಲೇ ವಿಶ್ವ ಕೆಡೆಟ್ ರೆಸ್ಲಿಂಗ್ ಚಾಂಪಿಯನ್‌ ಶಿಪ್‌ನಲ್ಲಿ ಭಾರತದ ಪ್ರಿಯಾ ಮಲಿಕ್ ಚಿನ್ನದ ಪದಕ ಗೆದ್ದಿದ್ದಾರೆ. ಆ ಮೂಲಕ ವಿಶ್ವ ರೆಸ್ಲಿಂಗ್ ಚಾಂಪಿಯನ್‌ ಶಿಪ್‌ ನಲ್ಲಿ ಚಿನ್ನದ ಪದಕ ಗೆದ್ದ ಮೊಟ್ಟಮೊದಲ ಭಾರತೀಯ ವನಿತೆ ಎಂಬ ಕೀರ್ತಿಗೂ ಪ್ರಿಯಾ ಪಾತ್ರರಾಗಿದ್ದಾರೆ.

ಹಂಗೆರಿಯ ಬುಡಾಪೆಸ್ಟ್‌ ನಲ್ಲಿ ನಡೆದ ನಡೆದ ವಿಶ್ವ ಕೆಡೆಟ್ ರೆಸ್ಲಿಂಗ್ ಚಾಂಪಿಯನ್‌ ಶಿಪ್‌ನ 73 ಕೆಜಿ ವಿಭಾಗದ ಫೈನಲ್‌ ನಲ್ಲಿ ಪ್ರತಿಸ್ಪರ್ಧಿ ಬೆಲರೂಸ್‌ ನ ರೆಸ್ಲರ್ ಕೆನಿಯಾ ಪಟಾಪೊವಿಚ್ ವಿರುದ್ಧ 5-0 ಅಂತರದಲ್ಲಿ ಭರ್ಜರಿಯಾಗಿ ಗೆಲ್ಲುವ ಮೂಲಕ ಪ್ರಿಯಾ ಮಲಿಕ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಗುರುವಾರ ನಡೆದ ವಿಶ್ವ ಕೆಡೆಟ್ ರೆಸ್ಲಿಂಗ್ ಚಾಂಪಿಯನ್‌ ಶಿಪ್‌ನ 65 ಕೆಜಿ ವಿಭಾಗದಲ್ಲಿ ಭಾರತದ ವರ್ಷ ಕಂಚಿನ ಪದಕ ಗೆದ್ದಿದ್ದರು.

2019ರಲ್ಲಿ ಪುಣೆಯಲ್ಲಿ ನಡೆದ ಖೇಲೋ ಇಂಡಿಯಾ ಕೂಟದಲ್ಲೂ ಪ್ರಿಯಾ ಮಲಿಕ್ ಚಿನ್ನದ ಪದಕ ಗೆದ್ದಿದ್ದರು. ಅದೇ ವರ್ಷ ದೆಹಲಿಯಲ್ಲಿ ಹಾಗೂ 2020ರ ಸ್ಕೂಲ್ ಗೇಮ್ಸ್‌ ನಲ್ಲೂ ಪ್ರಿಯಾ ಮಲಿಕ್ ಚಿನ್ನದ ಪದಕ ಗೆದ್ದಿದ್ದರು. ಪಾಟ್ನಾದಲ್ಲಿ ನಡೆದ ರಾಷ್ಟ್ರೀಯ ಕೆಡೆಟ್ ರೆಸ್ಲಿಂಗ್ ಚಾಂಪಿಯನ್‌ ಶಿಪ್‌ ನಲ್ಲೂ ಪ್ರಿಯಾ ಮಲಿಕ್ ಚಿನ್ನದ ಪದಕವನ್ನು ತನ್ನದಾಗಿಕೊಂಡಿದ್ದರು.

ಟೋಕಿಯೋ ಒಲಿಂಪಿಕ್ಸ್‌ ನ ಮೊದಲ ದಿನವೇ ನಿನ್ನೆ ಭಾರತದ ವೈಟ್‌ ಲಿಫ್ಟರ್ ಮೀರಾಬಾಯಿ ಚಾನು 49 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಒಟ್ಟು 202 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದು ದೇಶವೇ ಸಂಭ್ರಮ ಪಡುವಂತೆ ಮಾಡಿದ್ದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!